Advertisement

Hunsur ಟ್ರಾಕ್ಟರ್ ಕಳ್ಳತನ ಮಾಡಿದ್ದ ಆರೋಪಿ ಬಂಧನ

10:17 PM May 29, 2023 | Team Udayavani |

ಹುಣಸೂರು:ತಾಲೂಕಿನ ತಿಪ್ಪಲಾಪುರದಲ್ಲಿ ಟ್ರಾಕ್ಟರ್ ಮತ್ತು ಟ್ರೇಲರ್‌ನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ ಪ್ರಕರಣವನ್ನು ಭೇಧಿಸಿರುವ ಹುಣಸೂರು ಗ್ರಾಮಾಂತರ ಠಾಣಾ ಪೊಲೀಸರು ಟ್ರಾö್ಯಕ್ಟರ್ ವಶಕ್ಕೆ ಪಡೆದು ಆರೋಪಿಯೊರ್ವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Advertisement

ಚನ್ನರಾಯಪಟ್ಟಣ ತಾಲೂಕಿನ ಮಾಳೆಕೊಪ್ಪಲಿನ ಅಭಿಷೇಕ್ ಬಂಧಿತ ಆರೋಪಿ, ಮತ್ತೊರ್ವ ಪ್ರಮುಖ ಆರೋಪಿ ಕಾರ್ತಿಕ್ ತಲೆ ಮರೆಸಿಕೊಂಡಿದ್ದಾನೆ.

ಘಟನೆ ವಿವರ:ಚನ್ನರಾಯಪಟ್ಟಣ ತಾಲೂಕಿನ ಆಡಿಗನಹಳ್ಳಿ ಜಗದೀಶ್ ಎಂಬುವವರು ಹುಣಸೂರು ತಾಲೂಕು ತಿಪ್ಪಲಾಪುರದ ಜಮೀನಿನ ಮಣ್ಣು ಸಮತಟ್ಟು ಮಾಡುವ ಕೆಲಸಕ್ಕೆ ತಮ್ಮ ಸ್ವರಾಜ್ ಟ್ರಾಕ್ಟರ್ ಮತ್ತು ಟ್ರೇಲರ್‌ನ್ನು ಬಾಡಿಗೆಗೆ ನೀಡಿದ್ದರು. ಕೆಲಸ ಮಾಡುತ್ತಿದ್ದ ಜಮೀನಿನಲ್ಲೆ ಚಾಲಕ ಟ್ರಾಕ್ಟರ್ ನಿಲ್ಲಿ ಸಿದ್ದರು. ೨೦೨೩ರ ಮಾಚ್.3 ರಂದು ಟ್ರಾಕ್ಟರ್‌ ಹಾಗೂ ಟ್ರೇಲರ್ ನ್ನು ಆರೋಪಿಗಳು ಕಳ್ಳತನ ಮಾಡಿ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಮಾರಾಟ ಮಾಡಿದ್ದರು.

ಈ ಸಂಬಂಧ ಮಾಲಿಕ ಜಗದೀಶ್ ನೀಡಿದ ದೂರಿನನ್ವಯ ಎಸ್.ಪಿ. ಸೀಮಾಲಾಟ್ಕರ್, ಅಡಿಷನಲ್ ಎಸ್.ಪಿ. ಡಾ.ನಂದಿನಿ, ಡಿವೈಎಸ್‌ಪಿ. ಮಹೇಶ್.ಎಂ.ಕೆ. ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ಮೊಬೈಲ್ ಟವರ್ ಲೊಕೇಷನ್ ಬಳಸಿಕೊಂಡು ಆರೋಪಿಗಳ ಚಲನವಲನದ ಬಗ್ಗೆ ನಿಗಾ ಇರಿಸಿದ್ದ ಪೊಲೀಸರು ಸ್ವಗ್ರಾಮದಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಚನ್ನರಾಯಪಟ್ಟಣ ತಾಲೂಕಿನ ಮಾಳೆಕೊಪ್ಪಲಿನ ಮನೆಯಲ್ಲಿ ಬಂಧಿಸಿ,ವಿಚಾರಣೆ ನಡೆಸಿದ ವೇಳೆ ಕಳ್ಳತನ ಮಾಡಿದ್ದ ಟ್ರಾಕ್ಟರ್‌ನ್ನು ಕೆ.ಎಂ.ದೊಡ್ಡಿಯ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವ ಬಗ್ಗೆ ಒಪ್ಪಿಕೊಂಡ ಮೇರೆಗೆ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಮತ್ತೊರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸ್.ಐ.ಗಳಾದ ಎಚ್.ಎಸ್.ರವಿ, ಕೃಷ್ಣನಾಯಕ್ ಎ.ಎಸ್.ಐ.ಅಂತೋಣಿಕ್ರೂಸ್, ಸಿಬ್ಬಂದಿ ವಿಜಯರಘು, ಪ್ರಸನ್ನಕುಮಾರ್,ಇಮ್ರಾನ್ ಷರೀಫ್, ಲಿಖಿತ್, ಮಹದೇವಮ್ಮ ಭಾಗವಹಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next