Advertisement

ಮನೆಯವರ ಉಪಟಳ ಆರೋಪ: ಕುಕ್ಕೆಗೆ ಬಂದ 81ರ ಮಾಜಿ ಯೋಧ

12:01 AM Jun 21, 2023 | Team Udayavani |

ಸುಬ್ರಹ್ಮಣ್ಯ: ಮನೆಯವರ ಉಪಟಳದಿಂದ ಅವರೊಂದಿಗೆ ಜೀವಿಸಲು ಸಾಧ್ಯವಾಗದೇ ಮಾಜಿ ಯೋಧ 81 ವರ್ಷದ ವ್ಯಕ್ತಿಯೋರ್ವರು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿರುವ ಘಟನೆ ನಡೆದಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ವೃದ್ಧರೋರ್ವರು ತಿರುಗಾಡುತ್ತಿದ್ದದನ್ನು ಗಮನಿಸಿ ವಿಚಾರಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿ 81 ವರ್ಷದ ಭಕ್ತವತ್ಸಲ ಕುಕ್ಕೆಗೆ ಬಂದ ವೃದ್ಧ. ಭಾರತೀಯ ಸೇನೆಯಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದೆ, ಮನೆಯವರಿಗಾಗಿ ಕೆಲಸವನ್ನು ಬಿಟ್ಟ ಬಳಿಕ, ಅನೇಕ ಕಂಪೆನಿಗಳಲ್ಲಿ ದುಡಿದಿದ್ದೇನೆ. ಇಬ್ಬರು ಗಂಡು ಮಕ್ಕಳಿದ್ದು, ಅವರಿಗೆ ಮದುವೆ ಆಗಿದೆ ಎಂದಿದ್ದಾರೆ.

ಅವರಿಗೆ ಆಸ್ತಿಯನ್ನು ಬರೆದು ಕೊಟ್ಟಿದ್ದೇನೆ. ಇವಾಗ ಏನೂ ಇಲ್ಲ. ಎರಡನೇ ಮಗನ ಹೆಂಡತಿ ನನಗೆ ತೊಂದರೆ ನೀಡುತ್ತಿದ್ದಾರೆ. ಅವರು ಹೇಳಿದ ಹಾಗೆ ಕೇಳಬೇಕು ಎನ್ನುತ್ತಾರೆ. ಅದು ನನಗೆ ಇಷ್ಟ ಇಲ್ಲ ಅದಕ್ಕೆ ಮನೆಬಿಟ್ಟು ಇಲ್ಲಿಗೆ ಬಂದೆ. ಇಲ್ಲಿ ಊಟ ಸಿಕ್ಕಿದರೆ ಕೊಡಿ ಇಲ್ಲಾಂದ್ರೆ ಬೇಡ ಎಂದು ಹೇಳುತ್ತಿದ್ದಾರೆ.

ಇದೀಗ ವೃದ್ಧರನ್ನು ಸುಬ್ರಹ್ಮಣ್ಯ ಪೊಲೀಸ್‌ ಎಸ್‌ಐ ಮಂಜುನಾಥ್‌ ತಂಡದ ಸಹಕಾರದಲ್ಲಿ ರವಿ ಕಕ್ಕೆಪದವು ಸಮಾಜಸೇವಕ ಟ್ರಸ್ಟ್‌ ವತಿಯಿಂದ ರಕ್ಷಣೆ ಮಾಡಿ ಅವರ ಮಕ್ಕಳಿಗೆ ಫೋನ್‌ ಮಾಡಿ ತಂದೆಯನ್ನು ಕರೆದುಕೊಂಡು ಹೋಗಿ ಎಂದು ತಿಳಿಸಲಾಯಿತು. ಆದರೇ ವೃದ್ಧ ಮನೆಗೆ ತೆರಳಲು ನಿರಾಕರಿಸಿದ್ದಾರೆ. ಪೊಲೀಸರು ಮಕ್ಕಳಿಗೆ ಕರೆ ಮಾಡಿ ಕುಕ್ಕೆಗೆ ಬರುವಂತೆ ತಿಳಿಸಿದ್ದು, ಬರಲು ಒಪ್ಪಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.ಸುಬ್ರಹ್ಮಣ್ಯ, ಜೂ. 20: ಮನೆಯವರ ಉಪಟಳದಿಂದ ಅವರೊಂದಿಗೆ ಜೀವಿ
ಸಲು ಸಾಧ್ಯವಾಗದೇ ಮಾಜಿ ಯೋಧ 81 ವರ್ಷದ ವ್ಯಕ್ತಿಯೋರ್ವರು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿರುವ ಘಟನೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ವೃದ್ಧರೋರ್ವರು ತಿರುಗಾಡುತ್ತಿದ್ದದನ್ನು ಗಮನಿಸಿ ವಿಚಾರಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿ 81 ವರ್ಷದ ಭಕ್ತವತ್ಸಲ ಕುಕ್ಕೆಗೆ ಬಂದ ವೃದ್ಧ. ಭಾರತೀಯ ಸೇನೆಯಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದೆ, ಮನೆಯವರಿಗಾಗಿ ಕೆಲಸವನ್ನು ಬಿಟ್ಟ ಬಳಿಕ, ಅನೇಕ ಕಂಪೆನಿಗಳಲ್ಲಿ ದುಡಿದಿದ್ದೇನೆ. ಇಬ್ಬರು ಗಂಡು ಮಕ್ಕಳಿದ್ದು, ಅವರಿಗೆ ಮದುವೆ ಆಗಿದೆ ಎಂದಿದ್ದಾರೆ.

Advertisement

ಅವರಿಗೆ ಆಸ್ತಿಯನ್ನು ಬರೆದು ಕೊಟ್ಟಿದ್ದೇನೆ. ಇವಾಗ ಏನೂ ಇಲ್ಲ. ಎರಡನೇ ಮಗನ ಹೆಂಡತಿ ನನಗೆ ತೊಂದರೆ ನೀಡುತ್ತಿದ್ದಾರೆ. ಅವರು ಹೇಳಿದ ಹಾಗೆ ಕೇಳಬೇಕು ಎನ್ನುತ್ತಾರೆ. ಅದು ನನಗೆ ಇಷ್ಟ ಇಲ್ಲ ಅದಕ್ಕೆ ಮನೆಬಿಟ್ಟು ಇಲ್ಲಿಗೆ ಬಂದೆ. ಇಲ್ಲಿ ಊಟ ಸಿಕ್ಕಿದರೆ ಕೊಡಿ ಇಲ್ಲಾಂದ್ರೆ ಬೇಡ ಎಂದು ಹೇಳುತ್ತಿದ್ದಾರೆ.

ಇದೀಗ ವೃದ್ಧರನ್ನು ಸುಬ್ರಹ್ಮಣ್ಯ ಪೊಲೀಸ್‌ ಎಸ್‌ಐ ಮಂಜುನಾಥ್‌ ತಂಡದ ಸಹಕಾರದಲ್ಲಿ ರವಿ ಕಕ್ಕೆಪದವು ಸಮಾಜಸೇವಕ ಟ್ರಸ್ಟ್‌ ವತಿಯಿಂದ ರಕ್ಷಣೆ ಮಾಡಿ ಅವರ ಮಕ್ಕಳಿಗೆ ಫೋನ್‌ ಮಾಡಿ ತಂದೆಯನ್ನು ಕರೆದುಕೊಂಡು ಹೋಗಿ ಎಂದು ತಿಳಿಸಲಾಯಿತು. ಆದರೇ ವೃದ್ಧ ಮನೆಗೆ ತೆರಳಲು ನಿರಾಕರಿಸಿದ್ದಾರೆ. ಪೊಲೀಸರು ಮಕ್ಕಳಿಗೆ ಕರೆ ಮಾಡಿ ಕುಕ್ಕೆಗೆ ಬರುವಂತೆ ತಿಳಿಸಿದ್ದು, ಬರಲು ಒಪ್ಪಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next