Advertisement
ಸ್ಥಳೀಯ ಮದಕ್ಕಳದ ಮೊಯಿದ್ದೀನ್ ಆರಿಫ್ (22) ರವಿವಾರ ಗಾಂಜಾ ಅಮಲಿನಲ್ಲಿ ಗಲಾಟೆ ಮಾಡುತ್ತಿರುವಾಗ ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಈತನನ್ನು ಬಂಧಿಸಿ ಕೇಸು ದಾಖಲಿಸಿದ್ದರು. ಆ ಬಳಿಕ ಈತನನ್ನು ಸಂಬಂಧಿಕರಾದ ಅಬ್ದುಲ್ ರಶೀದ್ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದರು.ಸೋಮವಾರ ಬೆಳಗ್ಗೆ ಮನೆಯಲ್ಲಿ ಆರಿಫ್ ರಕ್ತವಾಂತಿ ಮಾಡಿದಾಗ ಈತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾ ಗಿದ್ದನು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಈತನ ಮೈಮೇಲೆ ಗಾಯವಾಗಿದ್ದು ಮೃತದೇಹವನ್ನು ಪರಿಯಾರಂ ಆಸ್ಪತ್ರೆಗೆ ಒಯ್ಯಲಾಗಿದೆ.