ಬೆಂಗಳೂರು: ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನೇ ಟಾರ್ಗೆಟ್ ಮಾಡಿಕೊಂಡುಮಾರಕಾಸ್ತ್ರ ತೋರಿಸಿ ಮೊಬೈಲ್ ಹಾಗೂ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸುಂಕದಕಟ್ಟೆ ವಿಘ್ನೇಶ್ವರನಗರ ನಿವಾಸಿ ಪವನ್(20) ಹಾಗೂ ಮುತ್ತುರಾಯಸ್ವಾಮಿ ಬಡಾವಣೆನಿವಾಸಿ ಪ್ರವೀಣ್(21) ಬಂಧಿತರು. ಆರೋಪಿ ಗಳಿಂದ 1.10 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 7 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಲುತ್ತಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಬಂಧಿತರು ಒಂದೇ ಬೈಕ್‌ನಲ್ಲಿ ನಗರದಾದ್ಯಂತ ಸುತ್ತಾಡಿ ವಾಯುವಿಹಾರಕ್ಕೆ ಹೋಗುವಹಾಗೂ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಬಸವೇಶ್ವರನಗರ ನಿವಾಸಿ ಧನಂಜಯ ಜ.29 ರಂದು ರಾತ್ರಿ 11.15ರ ಸುಮಾರಿಗೆ ಸಿದ್ದಯ್ಯಪುರಾಣಿಕ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ವಾಯು ವಿಹಾರಕ್ಕೆ ಹೋಗುತ್ತಿದ್ದರು. ಆ ವೇಳೆ ದ್ವಿಚಕ್ರ ವಾಹನದಲ್ಲಿಬಂದ ಆರೋಪಿಗಳು ಏಕಾಏಕಿ ಧನಂಜಯಅವರನ್ನು ಹಿಡಿದು ಚೂರಿ ತೋರಿಸಿ ಬಳಿಕ ತಲೆಗೆ ಮತ್ತು ಮುಖಕ್ಕೆ ಹಲ್ಲೆ ಮಾಡಿ 20 ಸಾವಿರ ರೂ.ಮೌಲ್ಯದ ಮೊಬೈಲ್, ಪರ್ಸ್ ನಲ್ಲಿದ್ದ 1 ಸಾವಿರ ರೂ. ಕಸಿದುಕೊಂಡು ಪರಾರಿಯಾಗಿದ್ದರು.