ಸುಳ್ಯ: ಯುವತಿಯನ್ನು ಕೊಲೆ ಮಾಡಿ ಶವವನ್ನು ಗೋಣಿಚೀಲದಲ್ಲಿ ತುಂಬಿಸಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
Advertisement
ಸುಳ್ಯದ ಬೀರಮಂಗಲದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಪಶ್ಚಿಮ ಬಂಗಾಲದ ಇಮ್ರಾನ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಯಲ್ಲಿ ತುಂಬಿಟ್ಟು ಪರಾರಿಯಾಗಿದ್ದ. ಪ್ರಕರಣದ ಆರೋಪಿ ಇಮ್ರಾನ್ ಶೇಖ್ ಎಂಬಾತನನ್ನು ಸುಳ್ಯ ಪೋಲೀಸರು ಬಂಧಿಸಿದ್ದಾರೆ.
ಪತ್ನಿಯನ್ನು ಕೊಂದು ಗೋಣಿಯಲ್ಲಿ ತುಂಬಿ ಸುಳ್ಯದಿಂದ ಪರಾರಿಯಾಗಿದ್ದ ಇಮ್ರಾನ್ ತನ್ನ ಊರಿಗೆ ಹೋಗಿದ್ದ ಎನ್ನಲಾಗಿದೆ. ತನಿಖೆ ನಡೆಸಿದ ಸುಳ್ಯ ಪೊಲೀಸರು ಅಲ್ಲಿನ ಪೋಲೀಸರ ಸಹಾಯ ಪಡೆದು ಬಂಧಿಸಿ, ಸುಳ್ಯಕ್ಕೆ ಕರೆತಂದಿರುವುದಾಗಿ ತಿಳಿದು ಬಂದಿದೆ.