Advertisement

ಕಾಸರಗೋಡು: 15.800 ಕಿ.ಗ್ರಾಂ ಗಾಂಜಾ ವಶ; ಇಬ್ಬರ ಬಂಧನ

06:42 PM Sep 22, 2022 | Team Udayavani |

ಕಾಸರಗೋಡು: ಜಿಲ್ಲೆಯ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ ಪೊಲೀಸರು ಒಟ್ಟು 15.800 ಕಿ.ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

Advertisement

ಪೆರ್ಲ ಇಡಿಯಡ್ಕದಿಂದ ಬದಿಯಡ್ಕ ಪೊಲೀಸರು ಕಾರೊಂದರಲ್ಲಿ ಸಾಗಿಸುತ್ತಿದ್ದ 13.950 ಕಿಲೋ ಗಾಂಜಾ ವಶಪಡಿಸಿದ್ದು, ಈ ಸಂಬಂಧ ಪೈವಳಿಕೆ ಚಿಪ್ಪಾರಿನ ಫಾಯೀಸ್‌ (26), ಉಪ್ಪಳ ಪತ್ವಾಡಿ ನಿವಾಸಿ ಅಬೂಬಕರ್‌ ಸಿದ್ದಿಕ್‌(28)ನನ್ನು ಬಂಧಿಸಿದ್ದಾರೆ. ಕಾರನ್ನು ವಶಪಡಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮೀಂಜ ಬೇರಿಕೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 1 ಕಿಲೋ 850 ಗ್ರಾಂ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಕೂಟರ್‌ ಬಿಟ್ಟು ಪರಾರಿಯಾದ ವ್ಯಕ್ತಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸ್ಕೂಟರ್‌ ವಶಪಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next