Advertisement

ನಕಲಿ ಛಾಪಾ ಕಾಗದ ಮಾರಾಟದ ಬೃಹತ್‌ ಜಾಲ ಪತ್ತೆ: ಆರೋಪಿಗಳ ಬಂಧನ

11:48 AM Aug 06, 2022 | Team Udayavani |

ಬೆಂಗಳೂರು: ನಿಷೇಧಿತ ಛಾಪಾ ಕಾಗದಗಳನ್ನು ನಕಲಿ ಮಾಡಿ ಮುದ್ರಿಸಿ ಬೇಕಾದ ಬೆಲೆಗೆ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Advertisement

ಪ್ರಮುಖ ಆರೋಪಿ ವೆಂಕಟೇಶ್‌, ವಿಶ್ವನಾಥ್‌, ಕಾರ್ತೀಕ್‌, ಶ್ಯಾಮರಾಜು, ಶಶಿಧರ್‌, ಕರಿಯಪ್ಪ, ರವಿಶಂಕರ್‌, ಶಿವಶಂಕರ, ಗುಣಶೇಖರ್‌, ರಾಘವ ಎನ್‌.ಕಿಶೋರ್‌ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 5.11 ಲಕ್ಷ ರೂ. ಮೌಲ್ಯದ ವಿವಿಧ ಮುಖ ಬೆಲೆಯ 2664 ನಕಲಿ ಛಾಪಾ ಕಾಗದಗಳು, ಕಂಪ್ಯೂಟರ್‌, ಪ್ರಿಂಟರ್‌, ವಿವಿಧ ಸರ್ಕಾರಿ ಕಚೇರಿಯ ಹೆಸರಿನ ಮುದ್ರೆಗಳು, 119 ನಕಲಿ ಸೀಲುಗಳು, ಮೊಬೈಲ್‌ಗಳು, ಹಾರ್ಡ್‌ಡಿಸ್ಕ್ ವಶಕ್ಕೆ ಪಡೆಯಲಾಗಿದೆ.

ಅಲ್ಲದೆ, ಆರೋಪಿಗಳು ಛಾಪಾ ಕಾಗ ದಗಳ ಮೂಲಕ ನಕಲಿಯಾಗಿ ಸೃಷ್ಟಿಸಿದ 1990, 1995, 2002ನೇ ಇಸವಿಯ ನಿವೇಶನವೊಂ ದರ ನಕಲಿ ಜಿಪಿಎ ಪತ್ರ ಮತ್ತು 2009ನೇ ಇಸವಿ ಯ ಹೆಬ್ಬೆಟ್ಟು ಪಡೆದುಕೊಂಡಿರುವ ಒಂದು ದಾಖಲೆ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ರಮನ್‌ ಗುಪ್ತಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರೋಪಿಗಳು ಸರ್ಕಾರದಿಂದ ನಿಷೇಧಿಸಲಾಗಿರುವ ಛಾಪಾ ಕಾಗದಗಳನ್ನು ಅವರಿಗೆ ಬೇಕಾದ ದಿನಾಂಕ ಮತ್ತು ಬೆಲೆಗೆ ತಕ್ಕಂತೆ ನಕಲಿ ಯಾಗಿ ಮುದ್ರಿಸಿಕೊಂಡು, ಅವುಗಳಿಗೆ ನಕಲಿ ಸೀಲ್‌ಗಳನ್ನು ಹಾಕುವುದು, ಹಲವಾರು ವರ್ಷಗಳ ಹಿಂದೆ ಫ್ರಾಂಕಿಂಗ್‌ ಪೇಪರ್‌ಗಳನ್ನು ಸೃಷ್ಟಿಸುವ ವ್ಯವಸ್ಥಿತ ಜಾಲವನ್ನು ಹೊಂದಿದ್ದರು. ಅವರಿಂದ ಖರೀದಿಸಿದ ಮಧ್ಯವರ್ಥಿಗಳು, ಛಾಪಾ ಕಾಗದಗಳನ್ನು ಬಳಸಿ ಹಿಂದಿನ ವರ್ಷ ಗಳ ಅಂದರೆ ಛಾಪಾ ಕಾಗದ ನಿಷೇಧಿಸಿದ ದಿನಾಂಕಕ್ಕೂ ಮೊದಲೇ ಇದ್ದಂತೆ ನಕಲಿ ದಾಖಲೆ ಗಳನ್ನು ಸೃಷ್ಟಿಸಿ, ವಿವಿಧ ಆಸ್ತಿಯ ನಕಲಿ ದಾಖಲೆ ಗಳನ್ನು ಸೃಷ್ಟಿಸಿ ಹಾಜರುಪಡಿಸುತ್ತಿದ್ದರು. ಅದರಿಂದ ಫ‌ಲಾನುಭವಿಗಳು, ಕೋರ್ಟ್‌, ಸರ್ಕಾರದ ವಿವಿಧ ಇಲಾಖೆಗಳಿಗೆ ಸಲ್ಲಿಸಿ ಲಕ್ಷಾಂತರ ರೂ. ವಂಚಿಸುತ್ತಿದ್ದರು. ಆರೋಪಿಗಳಿಂದ ಈಗಾಗಲೇ ಈ ನಕಲಿ ಛಾಪಾ ಕಾಗದಗಳಿಂದ ಸೃಷ್ಟಿಸಿ ನಾಲ್ಕು ನಕಲಿ ದಾಖಲೆಗಳನ್ನು, ಇತರೆ ನಕಲಿ ಛಾಪಾ ಕಾಗದಗಳನ್ನು ವಶಪಡಿಸಿ ಕೊಂಡಿದ್ದು, ಈ ಛಾಪಾ ಕಾಗದಗಳನ್ನು ಯಾರು? ಯಾರಿಗೆ? ಮಾರಾಟ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಲು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

5 ರಿಂದ 8 ಸಾವಿರ ರೂ.ಗೆ ಮಾರಾಟ : ಪ್ರತಿ ಛಾಪಾ ಕಾಗದವನ್ನು ಐದು ಸಾವಿರದಿಂದ 8 ಸಾವಿರ ರೂ.ಗೆ ಮಾರಾಟ ಮಾಡುತ್ತಿ ದ್ದರು. ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿರುವ 2664 ಛಾಪಾ ಕಾಗದಗಳನ್ನು ತಲಾ ಐದು ಸಾವಿರ ರೂ.ಗೆ ಮಾರಾಟ ಮಾಡಿದರೆ, 1.33 ಕೋಟಿ ರೂ. ಆಗುತ್ತದೆ. ಈ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ತಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಪತ್ತೆ ಹೇಗೆ? : ಹಲಸೂರು ಗೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಕಂದಾಯ ಭವನದ ಆವರಣ ದಲ್ಲಿರುವ ಟೈಪಿಂಗ್‌ ಪೂಲ್‌ನಲ್ಲಿರುವ ಕೆಲವು ಸ್ಟಾಲ್‌ಗಳಲ್ಲಿ ನಿಷೇಧಿತ ಛಾಪಾ ಕಾಗದಗಳನ್ನು ವಿವಿಧ ಮುಖಬೆಲೆಗೆ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next