ಕುಂಬಳೆ: ಕಳೆದ ಮಾ. 30ರಂದು ಎಸೆಸೆಲ್ಸಿ ಪರೀಕ್ಷೆಯ ಹಿಂದಿನ ದಿನದಂದು ಆದೂರು ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ 15ರ ಹರೆಯದ ವಿದ್ಯಾರ್ಥಿನಿ ಮನೆಯೊಳಗೆ ನೇಣಿಗೆ ಶರಣಾಗಿದ್ದಳು.
ಈಕೆಯನ್ನು ಓರ್ವ ನಿರಂತರವಾಗಿ ಹಿಂಬಾಲಿಸಿ ಬೆದರಿಕೆ ಒಡ್ಡುತ್ತಿರುವುದಾಗಿ ವಿದ್ಯಾರ್ಥಿನಿಯ ಸಹೋದರ ದೂರು ಸಲ್ಲಿಸಿದ್ದರು.
ಆದೂರು ಪೊಲೀಸರು ಬಾಲಕಿಯ ಸಹಪಾಟಿಗಳನ್ನು ಮತ್ತು ಸಹೋದರಿಯರನ್ನು ತನಿಖೆ ನಡೆಸಿ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಬಳಿಕ ನೆಕ್ರಾಜೆ ಆರ್ತಿಪಳ್ಳ ಮೂಲದ ಮುಳಿಯಾರು ಮೂಲಡ್ಕದ ಇರ್ಷಾದ್ (23) ಎಂಬಾತನನ್ನು ಬಂಧಿಸಿದ್ದಾರೆ.
Related Articles
ಈತನ ವಿರುದ್ಧ ಆದೂರು ಪೊಲೀಸರು ಪೋಕ್ಸೋ ಕಾಯ್ದೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧ ಕಾಯ್ದೆಯಡಿ ಬಂಧಿಸಿದ್ದಾರೆ.