ಕಾಸರಗೋಡು: ಪಿಕ್ಕಾಸಿನಿಂದ ತಲೆಗೆ ಹೊಡೆದು ಪತ್ನಿಯ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪತಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
Advertisement
ಎರ್ದುಂಕಡವು ಊಜಂಪಾಡಿ ಪಿ.ಎಂ.ಹೌಸ್‌ನ ಅಬ್ದುಲ್ಲ ಕುಂಞಿ (55) ಯನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 22 ರಂದು ಅಪರಾಹ್ನ ಕುಟುಂಬ ಸಮಸ್ಯೆಯ ವಿಷಯದಲ್ಲಿ ವಾಗ್ವಾದ ಉಂಟಾದ ಸಂದರ್ಭದಲ್ಲಿ ಪತ್ನಿ ಫರೀದಾ(42) ಅವರ ತಲೆಗೆ ಪಿಕ್ಕಾಸಿನಿಂದ ಹೊಡೆದು ಗಂಭೀರ ಗಾಯಗೊಳಿಸಿದ ದೂರಿನಂತೆ ಬಂಧಿಸಲಾಗಿದೆ.
ಬಂಧಿತನನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಿದೆ.