Advertisement

ಸಾರ್ವಜನಿಕರಿಗೆ ನಿಖರ ಮಾಹಿತಿ

11:00 PM Oct 07, 2021 | Team Udayavani |

ಉಡುಪಿ: ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾರ್ವಜನಿಕರು ವ್ಯವಹರಿಸಲು ಬಂದಾಗ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಿಗುವ ಸೌಲಭ್ಯಗಳ ನಿಖರ ಮಾಹಿತಿಯನ್ನು ಒದಗಿಸುವುದರೊಂದಿಗೆ ಗರಿಷ್ಠ ಸೇವೆಯನ್ನು ನೀಡಬೇಕೆಂದು ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ಹೇಳಿದರು.

Advertisement

ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರಿಗೆ ಸರಿಯಾದ ಸೇವಾ ಮಾಹಿತಿಗಳು ಒದಗಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇದಕ್ಕೆ ಆಸ್ಪದ ನೀಡದೆ ಉತ್ತಮ ಸೇವೆ ನೀಡಬೇಕು. ಬ್ಯಾಂಕಿಂಗ್‌ ಕಾರ್ಯವ್ಯಾಪ್ತಿಯಲ್ಲಿ ಬರುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮೂಲಕ  ಬ್ಯಾಂಕಿಂಗ್‌ ಕ್ಷೇತ್ರದ ಸೇವೆಗಳ ಬಗ್ಗೆ ವಿಶ್ವಾಸ ಮೂಡಿಸಬೇಕು. ಗರಿಷ್ಠ ಆರ್ಥಿಕ ಚಟುವಟಿಕೆಯನ್ನು ಬ್ಯಾಂಕ್‌ಗಳ ಮೂಲಕ ನಿರ್ವಹಿಸುವಂತೆ ಮಾಡಬೇಕು ಎಂದರು.

ಸಾಲ ಠೇವಣಿ ಅನುಪಾತ:

ಜಿಲ್ಲೆಯಲ್ಲಿ ಸಾಲ ಠೇವಣಿ ಅನುಪಾತವು 2020ರ ಜೂನ್‌ನಲ್ಲಿ ಶೇ. 45.27ರಷ್ಟು ಇದ್ದು, 2021ರ ಜೂನ್‌ನಲ್ಲಿ ಶೇ. 45.71 ಇದೆ. ಕ್ರೆಡಿಟ್‌ ಆಫ್ ಟೇಕ್‌ ಕನಿಷ್ಠ ಶೇ. 60 ಇರಬೇಕು. ಈ ಅನುಪಾತ ನಿಗದಿತ ಗುರಿಯನ್ನು ಸಾಧಿಸಬೇಕು. ಕೆನರಾ, ಯೂನಿಯನ್‌, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ, ಇಂಡಿಯನ್‌ ಓವರ್‌ ಸೀಸ್‌, ಐಡಿಬಿಐ, ಕರ್ನಾಟಕ, ಕೋಟಕ್‌ ಮಹೀಂದ್ರಾ, ಆಕ್ಸಿಸ್‌, ಎಸ್‌ ಬ್ಯಾಂಕ್‌ಗಳು ನಿಗದಿತ ಸಿ.ಡಿ. ಪ್ರಮಾಣ ಗುರಿ ಕಡಿಮೆಯಿದ್ದು, ಸುಧಾರಣೆ ಆಗಬೇಕು ಎಂದರು.

Advertisement

ಕಾಲಮಿತಿಯಲ್ಲಿಅರ್ಜಿ ವಿಲೇ ಮಾಡಿ:

ಸರಕಾರದ ವಿವಿಧ ಸಹಾಯಧನ ಆಧಾರಿತ ಅರ್ಥಿಕ ಸಹಾಯವನ್ನು ಒದಗಿಸಲು ಅರ್ಜಿಗಳನ್ನು ಶಿಫಾರಸು ಮಾಡಿ, ಬ್ಯಾಂಕ್‌ಗಳಿಗೆ ಕಳುಹಿಸಿದಾಗ ಸಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸದೆ ನಿಗದಿತ ಕಾಲಾವಧಿಯಲ್ಲಿ ಅವರಿಗೆ ಸೌಲಭ್ಯ ಒದಗಿಸಬೇಕು. ಕೌಶಲಾಭಿವೃದ್ಧಿ ತರಬೇತಿಗಳನ್ನು ಯುವಜನರಿಗೆ ಬ್ಯಾಕಿಂಗ್‌ ಸೆಕ್ಟರ್‌ಗಳು ನೀಡಿದಾಗ ಫ‌ಲಾನುಭವಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಗಳನ್ನು ಒದಗಿಸಿ, ಅವರನ್ನು ವೃತ್ತಿ ನಿರತರನ್ನಾಗಿಸುವುದರ ಜತೆಗೆ ಅರ್ಥಿಕವಾಗಿ ಸಶಕ್ತರನ್ನಾಗಿಸಬೇಕು ಎಂದರು.

28,976 ಕೋ.ರೂ. ಠೇವಣಿ; 13,247 ಕೋ.ರೂ. ಸಾಲ:

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪಿ.ಎಂ. ಪಿಂಜಾರ್‌ ಮಾತನಾಡಿ, ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ 28,976 ಕೋ.ರೂ. ಠೇವಣಿ ಸಂಗ್ರಹವಾಗುವ ಮೂಲಕ ಶೇ. 12.87ರಷ್ಟು ಬೆಳವಣಿಗೆಯಾಗಿದೆ. 13,247 ಕೋ.ರೂ.ಸಾಲದ ರೂಪದಲ್ಲಿ ನೀಡಲಾಗಿದೆ. ಪ್ರಥಮ ತ್ರೆçಮಾಸಿಕದ ಕೊನೆಯಲ್ಲಿ 2,290 ಕೋ.ರೂ. ಸಾಲದ ಗುರಿ ನೀಡಿದ್ದು, ಅದರಲ್ಲಿ 2,252 ಕೋ.ರೂ. ಸಾಲ ನೀಡಿ ಶೇ. 98.34ರಷ್ಟು ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ 757 ಕೋ.ರೂ., ಸಣ್ಣ ಹಾಗೂ ಮಧ್ಯಮ ವಲಯಗಳಿಗೆ 351 ಕೋ.ರೂ., ವಿದ್ಯಾಭ್ಯಾಸಕ್ಕೆ 6 ಕೋ.ರೂ., ಗೃಹ ಸಾಲ 61 ಕೋ.ರೂ., ಇತರ ಆದ್ಯತಾ ವಲಯಕ್ಕೆ 1,196 ಕೋ.ರೂ. ಹಾಗೂ ಆದ್ಯತೆಯಲ್ಲದ ವಲಯಕ್ಕೆ 517 ಕೋ.ರೂ. ಸಾಲ ನೀಡಲಾಗಿದೆ ಎಂದರು.

ಉಡುಪಿ ಪ್ರಾದೇಶಿಕ ಕಚೇರಿ ಪ್ರಬಂಧಕ ಕೆ. ಕಾಳಿ, ನಬಾರ್ಡ್‌ ಎಜಿಎಂ ಸಂಗೀತಾ,  ಬ್ಯಾಂಕ್‌ಗಳ ಪ್ರಾದೇಶಿಕ ವ್ಯವಸ್ಥಾಪಕರಾದ ಡಾ| ವಾಸಪ್ಪ, ಲೀನಾ ಪೀಟರ್‌ ಪಿಂಟೊ ಉಪಸ್ಥಿತರಿದ್ದರು.

ಎಟಿಎಂಗಳಿಗೂ ದಂಡ! :

ಬೆಂಗಳೂರು ಆರ್‌ಬಿಐಯ ಎಜಿಎಂ ವೆಂಕಟೇಶ್‌ ಮಾತನಾಡಿ, 2,000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಿಗೆ ಬ್ಯಾಂಕಿಂಗ್‌ ಸರ್ವಿಸ್‌ಒದಗಿಸಬೇಕು. ಬ್ಯಾಂಕಿಂಗ್‌ ವ್ಯವಹಾರಗಳು ಮುಂದಿನ ದಿನಗಳಲ್ಲಿ ಶೇ. 100ರಷ್ಟು ಡಿಜಿಟಲೀಕರಣವಾಗಬೇಕು. ಎಟಿಎಂಗಳಲ್ಲಿ ದಿನದ 24 ಗಂಟೆಯೂ ಹಣ ಇರಬೇಕು. ಸಕಾರಣವಿಲ್ಲದೆ ಎಟಿಎಂಗಳು ವ್ಯವಹರಿಸದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next