ಮಂಗಳೂರು: ಹಣತೆ ವ್ಯಾಪಾರಕ್ಕಾಗಿ ನಗರಕ್ಕೆ ಬಂದಿದ್ದ ತಮಿಳುನಾಡು ಸೇಲಂ ನಿವಾಸಿ ಮಾಯವೇಳ್ ಪೆರಿಯಸಾಮಿ (52) ಅವರನ್ನು ಕೊಲೆ ಮಾಡಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಆರೋಪಿ ಹೂವಿನ ಹಡಗಲಿ ರವಿ ಅಲಿಯಾಸ್ ವಕೀಲ್ ನಾಯ್ಕ (42)ನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಅ. 14ರಂದು ಮಾಯಾವೇಳ್ ಪರಿಯಸಾಮಿ ಮತ್ತು ಆತನ ಪತ್ನಿ ಅ. 14ರಂದು ನಗರಕ್ಕೆ ಬಂದು ಕುದ್ರೋಳಿಯ ಅಳಕೆ ಮಾರ್ಕೆಟ್ ಬಳಿ ಮಣ್ಣಿನ ದೀಪಗಳನ್ನು ಮಾರಾಟ ಮಾಡಿಕೊಂಡಿದ್ದರು. ಪೆರಿಯಸಾಮಿಯಿಂದ ಆರೋಪಿ ಹಲವು ಬಾರಿ ಹಣತೆ ಖರೀದಿಸಿದ್ದ. ಹಣತೆ ವ್ಯವಹಾರ ನೆಪದಲ್ಲಿ ಪೆರಿಯಸಾಮಿಯನ್ನು ಕೂಳೂರು ಮೈದಾನಕ್ಕೆ ಕರೆದೊಯ್ದು ಅಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಆರೋಪಿ ಹಣಕ್ಕಾಗಿ ಈ ಕೃತ್ಯ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.