Advertisement

Mangalore KMC;ಎನ್‌ಎಂಸಿ ಯಿಂದ ಎನ್‌ಎಪಿ-ಎಎಂಆರ್‌ ಪ್ರಾದೇಶಿಕ ಕೇಂದ್ರದ ಮಾನ್ಯತೆ

02:03 AM Jul 21, 2024 | Team Udayavani |

ಮಂಗಳೂರು: ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜು (ಕೆಎಂಸಿ) ಅನ್ನು ಪ್ರತಿ ಸೂಕ್ಷ್ಮಜೀವಿಗಳ ನಿರೋಧದ ರಾಷ್ಟ್ರೀಯ ಕಾರ್ಯಾಚರಣೆಯ ಪ್ರಾದೇಶಿಕ ಕೇಂದ್ರ (ಸೆಂಟರ್‌ ಫಾರ್‌ ದ ನ್ಯಾಶನಲ್‌ ಆ್ಯಕ್ಷನ್‌ ಪ್ಲ್ರಾನ್‌ ಆ್ಯಂಟಿ ಮೈಕ್ರೋಬಿಯಲ್‌ ರೆಸಿಸ್ಟೆನ್ಸ್‌)ವಾಗಿ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ನ್ಯಾಶನಲ್‌ ಮೆಡಿಕಲ್‌ ಕೌನ್ಸಿಲ್‌-ಎನ್‌ಎಂಸಿ) ಮಾನ್ಯ ಮಾಡಿದೆ.

Advertisement

ಮಣಿಪಾಲ ಸಮೂಹದ ವೈದ್ಯ ಕೀಯ ಶಿಕ್ಷಣ ಸಂಸ್ಥೆಗಳು ಪ್ರತಿ ಸೂûಾ¾ಣು ಜೀವಿಗಳ ನಿರೋಧದ ಕುರಿತ ಹೋರಾಟ ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಈ ಮಾನ್ಯತೆಯು ಪ್ರಮುಖ ಮೈಲಿಗಲ್ಲು. ಮಂಡಳಿಯು ದೇಶದ ವೈದ್ಯ ಕಾಲೇಜು ಮತ್ತು ಸಂಸ್ಥೆಗಳಲ್ಲಿ ವೈದ್ಯರನ್ನು ತರ ಬೇತಿಗೊಳಿಸಲು ಸಂಪನ್ಮೂಲ ಪ್ರಾಧ್ಯಾ ಪಕರನ್ನು ಸಿದ್ಧಪಡಿಸುತ್ತಿದೆ. ಇದರಡಿ ಮಂಗಳೂರಿನ ಕೆಎಂಸಿ ಯನ್ನು ಅ ಧಿಕೃತ ಪ್ರಾದೇಶಿಕ ಕೇಂದ್ರ ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಉಪಕುಲಪತಿ ಡಾ| ಎಂ.ಡಿ. ವೆಂಕಟೇಶ್‌ ಹೇಳಿದರು.

ಮಂಗಳೂರಿನ ಕೆಎಂಸಿಯ ಡೀನ್‌ ಡಾ| ಉಣ್ಣಿಕೃಷ್ಣನ್‌ ಮಾತನಾಡಿ, ಸಮಾಜವನ್ನು ಆರೋಗ್ಯಪೂರ್ಣ ವಾಗಿಸುವ ಎನ್‌ಎಂಸಿಯ ಆಶಯ ವನ್ನು ಬೆಂಬಲಿಸುವ ಅವಕಾಶ ದೊರೆ ತಿದೆ. ಮಾಹೆಯ ಬೋಧಕರಿಗೆ ದೊರೆತ ಅತ್ಯುತ್ತಮ ಅವಕಾಶ ಇದಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next