Advertisement

ಖಾತೆ ಸಮಸ್ಯೆ: ನಗರಸಭೆ ವಿರುದ್ಧ  ಪ್ರತಿಭಟನೆ ಎಚ್ಚರಿಕೆ

02:30 PM Jan 15, 2023 | Team Udayavani |

ಚನ್ನಪಟ್ಟಣ: ಕಳೆದ 20 ವರ್ಷಗಳಿಂದಲೂ ನಗರಸಭೆಯ ಅಧಿಕಾರಿಗಳು ಸಿಎಂಸಿ ಬಡಾವಣೆಯ ನಿವೇಶನಗಳ ಖಾತೆಯ ಸಮಸ್ಯೆಯನ್ನು ಬಗೆಹರಿಸುವ ಬದಲಾಗಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಹಾಗೂ ದಲಿತರಿಗೆ ಸೇರಿರುವ ನಿವೇಶನಗಳು ಎಂಬ ಉದ್ದೇಶದಿಂದ ಕಡೆಗಣನೆ ಮಾಡುತ್ತಿದ್ದಾರೆ. ಮೂಲ ದಾಖಲೆಗಳನ್ನು ನೀಡಿದರೂ, ಹಿಂದೇಟು ಹಾಕುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡಲು ಸ್ಥಳೀಯ ನಿವಾಸಿಗಳು ಮುಂದಾಗಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಶಿವಣ್ಣ ತಿಳಿಸಿದರು.

Advertisement

ಸಿಎಂಸಿ ಬಡಾವಣೆಯ ಉದ್ಯಾನವನದಲ್ಲಿ ಸಿಎಂಸಿ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೆ ದಾಖಲೆಗಳ ಮೂಲಕ ಕೋರ್ಟ್‌ಗೆ ದೂರು ಸಲ್ಲಿಸಿದ್ದು, ಇದರ ಬಗ್ಗೆ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಕೆಲವೊಂದು ಬಾರಿ ನಗರಸಭೆಯಲ್ಲಿ ಖಾತೆಗಳ ಬಗ್ಗೆ ಪ್ರಶ್ನಿಸಿದರೆ, ಇದಕ್ಕೂ ನಮಗೂ ಸಂಭಂದವಿಲ್ಲ ಎಂದು ಅಡ್ಡಗೋಡೆಯಲ್ಲಿ ದೀಪವಿಟ್ಟಂತೆ ತಿಳಿಸಿ ಈಗಲ್ಲ ಮುಂದಿನ ದಿನಗಳಲ್ಲಿ ಖಾತೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಅರ್ಜಿ ಸಲ್ಲಿಸಿ ರಸೀದಿ ಪಡೆಯಿರಿ: ನಿವೇಶನಗಳ ಖಾತೆಗಾಗಿ ಫೆ. ಮೊದಲನೇ ವಾರಕ್ಕೆ ವಾದವಿದ್ದು, ನಮ್ಮಗಳ ಪರವಾಗಿ ಆದೇಶ ಹೊರಡಲಿದೆ ಎಂಬ ವಿಶ್ವಾಸವಿದೆ. ಇದರ ಬಗ್ಗೆ ಈಗಾಗಲೆ ವಕೀಲರು ಮಾಹಿತಿ ನೀಡಿದ್ದಾರೆ. ಅಕಸ್ಮಾತ್‌ ಬದಲಾವಣೆ ಅದರೂ ಸಹ ನಗರಸಭೆಗೆ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿ ರಸೀದಿ ಪಡೆಯಿರಿ. ಈಗಾಗಲೆ 470 ನಿವೇಶನಗಳಲ್ಲಿ 272 ನಿವೇಶನಗಳಿಗೆ ಖಾತೆ ಯಾಕೇ ಆಗಿಲ್ಲ ಎಂಬ ಪ್ರಶ್ನೆàಯ ಮೂಲಕ ಹೋರಾಟ ಮಾಡೋಣ ಎಂದರು.

ಪೌರಾಯುಕ್ತರ ಜತೆಯಲ್ಲಿ ಚರ್ಚೆ: ರೇಷ್ಮೇ ಇಲಾಖೆಯ ನಿವೃತ್ತ ಅಧಿಕಾರಿ ಗುಂಡಣ್ಣ ಮಾತನಾಡಿ, ಇ-ಖಾತೆಗಳಿಗೆ ನಿವೇಶನದಾರರು ನಿಮ್ಮಗಳ ನಿವೇಶನಗಳಲ್ಲಿ ಭಾವಚಿತ್ರ ತಗೆದುಕೊಂಡು ಇಸಿ ಮತ್ತು ಪತ್ರಗಳನ್ನು ಮತ್ತೋಮ್ಮೆ ನಗರಸಭೆ ಸಲ್ಲಿಸಲು ನಿವೆಲ್ಲರೂ ಮುಂದಾಗಬೇಕಾಗಿದೆ. ಈಗಾಗಲೆ ಪೌರಾಯುಕ್ತರ ಜತೆಯಲ್ಲಿ ಚರ್ಚಿಸಲಾಗಿದೆ. ಕೋರ್ಟ್‌ ಅದೇಶ ಬರುವ ಮುನ್ನವೇ ನಮ್ಮಗಳ ಜವಾಬ್ದಾರಿಯುತವಾದ ಕಾರ್ಯ ನಿರ್ವಹಿಸೋಣ ಎಂದು ತಿಳಿಸಿದರು.

ಸಮಸ್ಯೆ ಬಗ್ಗೆ ಕಿಂಚಿತ್ತು ಕಣ್ಣು ಬಿಟ್ಟಿಲ್ಲ: ನಿವೃತ್ತ ಪ್ರಾಂಶುಪಾಲ ಶಿವರಾಮೇಗೌಡ ಮಾತನಾಡಿ, ಹಿಂದೆ ಆಗಿರುವ ತೊಂದರೆಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸರ್ಕಾರದ ಅದೇಶದಂತೆ ಮೂಲ ದಾಖಲೆಗಳನ್ನು ಸಿದ್ದಪಡಿಸಿ ಅರ್ಜಿ ಸಲ್ಲಿಸಿ. ನಗರಸಭೆ ಸದಸ್ಯರು ಪಕ್ಷೇತರವಾಗಿ ಜಯಗಳಿಸಿದ್ದಾರೆ. ಮುಖ್ಯಮಂತ್ರಿ ಯಾಗಲಿ, ಶಾಸಕರಾಗಲಿ, ಯಾರೇ ಜನಪ್ರತಿನಿಧಿಗಳಾ ಗಲಿ ಇದರ ಬಗ್ಗೆ ಕಿಂಚಿತ್ತು ಕಣ್ಣು ಬಿಟ್ಟಿಲ್ಲ. ಹಾಗಾಗಿ, ಪಕ್ಷೇತರವಾಗಿ ಜಯಗಳಿಸಿ ನಗರಸಭೆ ಸದಸ್ಯರಾಗಿ ರುವ ನೀವು ಇದರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು. ನಗರಸಭೆ ಸದಸ್ಯ ಕುಮಾರ್‌, ಆರ್‌ಟಿಒ ಮಾದೇವಪ್ಪ, ಅಭಿಯಂತರ ರಾಜಣ್ಣ, ಮರಿಯಪ್ಪ ಸೇರಿದಂತೆ ಮತ್ತಿತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next