Advertisement

ಗ್ರಾಮ ವಿಕಾಸದಡಿ ರಾಜೇಶ್ವರ ಗ್ರಾಮಕ್ಕೆ ಸೌಕರ್ಯ

01:08 PM Feb 19, 2018 | Team Udayavani |

ಬಸವಕಲ್ಯಾಣ: ರಾಜೇಶ್ವರ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲು ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆ ಮಾಡಲಾಗಿದ್ದು, 1ಕೋಟಿ ರೂಪಾಯಿ ಕಾಮಗಾರಿಗಳು ಪೂರ್ಣಗೂಂಡಿವೆ ಎಂದು ಭೂಸೇನಾ ನಿಗಮದ ಅಧ್ಯಕ್ಷ, ಶಾಸಕ ರಾಜಶೇಖರ ಪಾಟೀಲ ಎಚ್ಚರಿಸಿದರು.

Advertisement

ರಾಜೇಶ್ವರ ಗ್ರಾಮದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಎಚ್‌ಕೆಆರ್‌ಡಿಬಿ ಯೋಜನೆಯಡಿ ಗ್ರಾಮದಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು. ಹುಮನಾಬಾದ ಕೇತ್ರ ವ್ಯಾಪ್ತಿಗೆ ಒಳಪಡುವ ರಾಜೇಶ್ವರ ಹೋಬಳಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ
ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. 

ವಿಶೇಷ ಅನುದಾನದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ, ಭೋವಿ
ಸಮಾಜ ಸೇರಿದಂತೆ ವಿವಿಧ ಸಮಾಜಗಳ ಸಮುದಾಯ ಭವನ ನಿರ್ಮಾಣಕ್ಕಾಗಿ ತಲಾ 5 ಲಕ್ಷ ರೂ. ಹಾಗೂ ಅಂಬೇಡ್ಕರ ಭವನಕ್ಕಾಗಿ 30ಲಕ್ಷ ರೂಪಾಯಿ ಅನುದಾನ ಕಲ್ಪಿಸಲಾಗಿದೆ. 

ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಎಸ್‌ಸಿಎಸ್‌ಟಿ ಓಣಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ
ನಿರಂತರ ಜ್ಯೋತಿ ಯೋಜನೆ ಜಾರಿಗೆ ತಂದು ದಿನದ 24 ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜೇಶ್ವರ ಗ್ರಾಪಂಗೆ ಇಗಾಗಲೆ 250 ಮನೆಗಳು ಮಂಜುರಾಗಿದ್ದು, ಇನ್ನೂ ಹೆಚ್ಚುರಿಯಾಗಿ 40 ಮನೆಗಳನ್ನು
ಮಂಜೂರು ಮಾಡಿಸಿದ್ದೇನೆ. ಆಶ್ರಯವಿಲ್ಲದ ಬಡ ಜನರಿಗೆ ಮನೆಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳು ಆದ್ಯತೆ
ನೀಡಬೇಕು. ಮನೆ ಹಂಚಿಕೆಯಲ್ಲಿ ಅಕ್ರಮ ನಡೆದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೂಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು. ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಯೋಜನೆಗಳನ್ನು ಅರ್ಹಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಚಿನ್ನಮ್ಮಾ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಲಕ್ಷ್ಮಣರಾವ್‌ ಬುಳ್ಳಾ, ಜಿಪಂ ಮಾಜಿ ಅಧ್ಯಕ್ಷೆ ಅನುರಾಧಾ ತಪಲಿ, ಮಾಜಿ ಸದಸ್ಯ ವೀರಣ್ಣಾ ಪಾಟೀಲ, ಸುನೀಲಸಿಂಗ್‌ ಹಜಾರೆ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ್‌ ಪಾಟೀಲ, ತಾಪಂ ಸದಸ್ಯರಾದ ನರಸಾರಡ್ಡಿ, ಅಶ್ವಿ‌ನಿ ಸುಗುರ, ಜ್ಯೋತಿ ಅಂತಪ್ಪನೋರ್‌, ತಹಶೀಲ್ದಾರ್‌ ಜಗನ್ನಾಥ ರಡ್ಡಿ, ಪ್ರಮುಖರಾದ ಶಿವರಾಜ ಸೀಗಿ, ದೀಪಕ ಪೊಸ್ತರ ಸೇರಿದಂತೆ ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. 

ರಾಜೇಶ್ವರ ಗ್ರಾಮದಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಮಾಡಬೇಕೆಂಬುದು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದೆ. ನನ್ನ ಅಧಿಕಾರ ಅವಧಿಯ ಒಳಗಾಗಿ ರಾಜೇಶ್ವರ ಗ್ರಾಮದಲ್ಲಿ ನೂತನ್‌ ಬಸ್‌ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡುತ್ತೇನೆ.
 ರಾಜಶೇಖರ ಪಾಟೀಲ, ಶಾಸಕರು, ಹುಮನಾಬಾದ 

Advertisement

Udayavani is now on Telegram. Click here to join our channel and stay updated with the latest news.

Next