Advertisement

ಬಂಗಾರದ ಅಂಗಡಿಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

05:39 PM Jun 11, 2022 | Shwetha M |

ಕೊಲ್ಹಾರ: ಪಟ್ಟಣದ ಬಂಗಾರದ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಢ ಸಂಭವಿಸಿದ ಪರಿಣಾಮ ಅಪಾರ ಪ್ರಮಾಣದ ಚಿನ್ನ ಆಭರಣಗಳು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿವೆ.

Advertisement

ಸ್ವಾಮಿ ವಿವೇಕಾನಂದ ಸರ್ಕಲ್‌ ಹತ್ತಿರದ ಹುಚ್ಚಗೋಳ ಕಾಂಪ್ಲೆಕ್ಸ್‌ನಲ್ಲಿರುವ ವೈಷ್ಣವಿ ಜ್ಯುವೆಲ್ಲರಿ ವರ್ಕ್ಸ್ (ಬಂಗಾರದ)ಅಂಗಡಿಯಲ್ಲಿ ಅಗ್ನಿ ಅವಘಢ ಸಂಭವಿಸಿದೆ. ‌

ಬೆಂಕಿ ಹೊತ್ತಿಕೊಂಡ ಪರಿಣಾಮ 5 ಲಕ್ಷ ಮೌಲ್ಯದ ಬೆಳ್ಳಿಯ ಆಭರಣ, 4.50 ಲಕ್ಷ ಮೌಲ್ಯದ ಪೀಠೊಪಕರಣ, 40 ಸಾವಿರ ರೂ. ಎಲ್‌ಇಡಿ ಟಿವಿ, 35 ಸಾವಿರ ಮೌಲ್ಯದ ಎಸಿ ಸೇರಿ ಹೀಗೆ ಅಪಾರ ಪ್ರಮಾಣದ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಗ್ಯಾಸ್‌ ಬ್ಲಾಸ್ಟ್‌ ಆದ ಪರಿಣಾಮ ಬೆಂಕಿ ತಗುಲಿ ಈ ಒಂದು ಅಗ್ನಿ ಅವಘಡ ಸಂಭಾವಿಸಿದೆ. ಅಗ್ನಿಶಾಮಕ ದಳದ ವಾಹನ ಬರುವಷ್ಟರಲ್ಲಿ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ಮಾಲೀಕ ಮೌನೇಶ್‌ ಬಡಿಗೇರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಅದೇ ಕಟ್ಟಡದಲ್ಲಿ ಇರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸಿಬ್ಬಂದಿ ಸ್ಥಳೀಯರೊಂದಿಗೆ ಬೆಂಕಿ ನಂದಿಸಲು ಸಾಕಸ್ಟು ಪ್ರಯತ್ನ ಪಟ್ಟರು ಬೆಂಕಿಯ ಪರಿಣಾಮ ಹೆಚ್ಚುತ್ತಲೆ ಇತ್ತು. ಮಾಜಿ ಸೈನಿಕ ಸದಾಶಿವ ಗಣಿಯವರು ಬಕೆಟ್‌ ಮೂಲಕ ನೀರು ತಂದು ಚೆಲ್ಲಿ ಅಂಗಡಿಯಲ್ಲಿನ 3.50 ಲಕ್ಷ ನಗದು ಹಾಗೂ ಕೆಲ ಚಿನ್ನಾಭರಣವನ್ನು ಹೊರ ತಂದು ಅಂಗಡಿ ಮಾಲೀಕರಿಗೆ ನೀಡಿದ್ದಾರೆ. ಮಾಜಿ ಸೈನಿಕರ ಕಾರ್ಯವನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಪ್ರೀತಂ ನಾಯಕ ಮತ್ತು ಬಿಳಗಿ ಅಗ್ನಿ ಶಾಮಕದಳದ ಠಾಣಾಧಿಕಾರಿ ಆನಂದ ಚಿನಗೊಂಡ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next