ಬೆಳ್ತಂಗಡಿ: ಮುಂಡಾಜೆ ಗ್ರಾಮದ ಅಗರಿ ಚಾಕೋ ಅವರ ರಬ್ಬರ್ ತೋಟಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು, ಸ್ಥಳೀಯರ ಸ್ಪಂದನೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.
Advertisement
ಸೋಮವಾರ ಮಧ್ಯಾಹ್ನ ರಬ್ಬರ್ ತೋಟದಲ್ಲಿ ಒಣಹುಲ್ಲಿನಲ್ಲಿ ಬೆಂಕಿ ಕಂಡು ಬಂದು ಬಹಳ ವೇಗವಾಗಿ ಸುಮಾರು 2 ಎಕರೆ ರಬ್ಬರ್ ತೋಟಕ್ಕೆ ಹರಡಿತು. ಸ್ಥಳೀಯರಾದ ರಾಮಣ್ಣ ಶೆಟ್ಟಿ, ಸಚಿನ್ ಭಿಡೆ, ಜಗದೀಶ್ ನಾಯ್ಕ, ಗಣೇಶ್ ಬಂಗೇರ, ಭರತ್ ಶೆಟ್ಟಿ ಮೊದಲಾದವರು ಸೇರಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಸುಮಾರು 300 ರಬ್ಬರ್ ಗಿಡ ಇರುವ ಜಾಗಕ್ಕೆ ಬೆಂಕಿ ತಗಲಿದ್ದು, ರಬ್ಬರ್ ಗಿಡಗಳಿಗೆ ಹೆಚ್ಚಿನ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.