ಕಿನ್ನಿಗೋಳಿ: ಕಟೀಲು ಸಮೀಪದ ಕಲ್ಲಕುಮೇರು ಬಳಿ ದ್ವಿಚಕ್ರವಾಹನ ದಿಂದ ಮಹಿಳೆಯೋರ್ವರು ಬಿದ್ದು ಮೃತಪಟ್ಟ ಘಟನೆ ಕಟೀಲು ಸಮೀದ ಕಲ್ಲಕುಮೇರುನಲ್ಲಿ ಗುರುವಾರ ನಡೆದಿದೆ. ಮೃತ ಮಹಿಳೆಯನ್ನು ಕಾರ್ಕಳದ ಈದು ಗ್ರಾಮದ ಮಮತಾ ಶೆಟ್ಟಿ (35) ಎಂದು ಗುರುತಿಸಲಾಗಿದೆ, ಕಾರ್ಕಳದಿಂದ ಕಟೀಲಿಗೆ ತನ್ನ ಪತಿಯ ದ್ವಿಚಕ್ರ ವಾಹನದಲ್ಲಿ ಬೆಳಿಗ್ಗೆ 5.30 ಬರುತ್ತಿದ್ದ ಸಂದರ್ಭ ಕಲ್ಲಕುಮೇರು ಬಳಿ ಹಪ್ಸ್ ಗಮನಿಸದ ಬರುತ್ತಿದ್ದರು ಈ ಸಂದರ್ಭ ಹಿಂಬದಿ ಸವಾರರಾಗಿದ್ದ ಪತ್ನಿ ಮಮತಾ ಶೆಟ್ಟಿ ದ್ವಿಚಕ್ರ ವಾಹನದಿಂದ ಬಿದ್ದಿದ್ದಾರೆ, ಕೂಡಲೇ ಸಮೀಪದ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಶೆಟ್ಟಿ ಮೃತ ಪಟ್ಟಿದ್ದಾರೆ.
ಸ್ಥಳಿಯರಾದ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಂದರ ನಿಡ್ಡೋಡಿ, ಅಭಿಲಾಷ್ ಶೆಟ್ಟಿ ಕಟೀಲು ಅಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿ ನೀಡಿ ಸಹಕರಿಸಿದ್ದಾರೆ. ಮಮತಾ ಶೆಟ್ಟಿ ಅಂಗನವಾಡಿ ಕಾರ್ಯಕರ್ತೆ ಎಂದು ಗುರುತಿಸಲಾಗಿದೆ.