ಲಂಡನ್: ಮಾಧ್ಯಮಗಳು ಬೆನ್ನಟ್ಟಿದ್ದ ಪರಿಣಾಮ ವೇಗವಾಗಿ ಕಾರು ಚಲಾಯಿಸಿ ಬ್ರಿಟನ್ ರಾಣಿ ಡಯಾನಾ ಮೃತಪಟ್ಟಿದ್ದರು ಎಂಬ ಆರೋಪಗಳ ನಡುವೆಯೇ ಈಗ ಡಯಾನಾ ಪುತ್ರ ಬ್ರಿಟನ್ ರಾಜಕುಮಾರ ಹ್ಯಾರಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಕೂದಲೆಳೆಯ ಅಂತರದಲ್ಲಿ ಬಹುದೊಡ್ಡ ಅಪಘಾತ ದಿಂದ ಪ್ರಿನ್ಸ್ ಹ್ಯಾರಿ ಹಾಗೂ ಅವರ ಪತ್ನಿ ಮೆಘಾನ್ ಪಾರಾಗಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆ ದ ಕಾರ್ಯಕ್ರಮವೊಂದ ರಲ್ಲಿ ಪ್ರಿನ್ಸ್ ಹ್ಯಾರಿ, ಮೆಘಾನ್ ಹಾಗೂ ಅವರ ತಾಯಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಸಿ ಹೊರಬಂದದ್ದೇ ತಡ ಛಾಯಾಗ್ರಾಹಕರು, ಪತ್ರಕರ್ತರು ಅವರನ್ನು ಮುತ್ತಿದ್ದರು. ಹ್ಯಾರಿ ಹಾಗೂ ಕುಟುಂಬ ಕಾರು ಏರಿ ಕುಳಿತರೂ ಹಿಂದೆಯೇ ರೇಸ್‌ಗೆ ಬಿದ್ದವರಂತೆ ಬಂದ ಸುದ್ದಿ ಸಂಸ್ಥೆಗಳ ಪ್ರತಿನಿಧಿಗಳು ಟ್ರಾಫಿಕ್ ರೂಲ್ಸ್‌ಗಳನ್ನೂ ಮೀರಿ ಸುದ್ದಿಯ ಹಪಾಹಪಿಗೆ ಬಿದ್ದಿದ್ದಾರೆ. ಇದರಿಂದ ಸಾರ್ವಜನಿಕರು, ಪೊಲೀಸರ ಕೋಪಕ್ಕೂ ಗುರಿಯಾಗಿದ್ದಾರೆ. ಅವರ ಹಿಂಬಾಲಿಸುವಿಕೆ ಎಷ್ಟು ಅಪಾಯಕಾರಿಯಾಗಿತ್ತೆಂದರೆ ಹ್ಯಾರಿ ಕುಳಿತಿದ್ದ ಕಾರು ಅಪಘಾತಕ್ಕೆ ಈಡಾಗುವ ಸಾಧ್ಯತೆಯೇ ಹೆಚ್ಚಿತ್ತು. ಅದೃಷ್ಟವಶಾತ್ ಯಾವುದೇ ದುರ್ಘಟನೆ ನಡೆದಿಲ್ಲ ಎಂದು ಹ್ಯಾರಿ ವಕ್ತಾರ ತಿಳಿಸಿದ್ದಾರೆ.