Advertisement
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪಾರ್ಪಿಕಲ್ ಬದಿಯಡ್ಕ ನಿವಾಸಿ ಚಿನ್ನಮ್ಮ (55) ಹಾಗೂ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ನೂಜಿಲ ನಿವಾಸಿ ಹರೀಶ್ ಆಚಾರಿ (35) ಮೃತಪಟ್ಟವರು.
ಬಿಳಿನೆಲೆ ಗ್ರಾಮದ ಕೈಕಂಬ ಚೇರುವಿನಲ್ಲಿ ನಿರ್ಮಾಣವಾಗುತ್ತಿರುವ ಮನೆಯೊಂದರ ಕಾಂಕ್ರೀಟ್ ಸ್ಲಾéಬ್‌ನ ಕೆಲಸಕ್ಕಾಗಿ ಗುತ್ತಿಗೆದಾರರ ಜತೆಗೆ ತಂಡವಾಗಿ ಮಿನಿ ಲಾರಿಯಲ್ಲಿ ಕೊಕ್ಕಡದಿಂದ ಗುಂಡ್ಯ ಮಾರ್ಗವಾಗಿ ಈ ಕಾರ್ಮಿಕರು ಹೊರಟಿದ್ದರು. ಉದನೆ ಬಳಿ ರಾ. ಹೆದ್ದಾರಿಗೆ ನೆರೆನೀರು ನುಗ್ಗಿ ರಸ್ತೆ ಸಂಪರ್ಕ ಕಡಿದಿದ್ದ ಪರಿಣಾಮವಾಗಿ ಮಾರ್ಗ ಬದಲಿಸಿ ಇಚ್ಲಂಪಾಡಿ-ಮರ್ದಾಳ ಮಾರ್ಗವಾಗಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ಐತ್ತೂರು ಗ್ರಾಮದ ಕಲ್ಲಾಜೆ ಸೇತುವೆಯನ್ನು ದಾಟಿ ಮುಂದೆ ಸಾಗುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಓಲಾಡುತ್ತಾ ಕೊಂಚ ದೂರ ಸಾಗಿ ರಸ್ತೆಯ ಪಕ್ಕಕ್ಕೆ ಉರುಳಿಬಿತ್ತು. ಲಾರಿ ಉರುಳಿಬೀಳುವ ವೇಳೆ ಲಾರಿಯೊಳಗಿದ್ದ ಕಾಂಕ್ರೀಟ್ ಮಿಲ್ಲರ್‌ನಡಿ ಸಿಲುಕಿದ ಚಿನ್ನಮ್ಮ ಹಾಗೂ ಹರೀಶ್ ಆಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.