Advertisement
ಮಂಗಳೂರು ತಾಲೂಕು ಉರ್ವಾ ನಿವಾಸಿ ಚರಣ್ (20) ಮತ್ತು ಬಂಟ್ವಾಳ ತಾಲೂಕು ವಾಮದಪದವು ಮಜಲೋಡಿ ನಿವಾಸಿ ಮಹಮದ್ ನೌಶಾದ್ (20 ) ಮೃತ ಯುವಕರು.
ಘಟನೆ ನಡೆದ ತತ್‌ಕ್ಷಣ ಸ್ಥಳೀಯ ನಿವಾಸಿಗಳು ಸಹಾಯಕ್ಕೆ ಧಾವಿಸಿ ಬಸ್ ಚಕ್ರದಡಿ ಸಿಲುಕಿ ಚಿಂತಾಜನಕ ಸ್ಥಿತಿ ಯಲ್ಲಿದ್ದ ಯುವಕರನ್ನು ಹರಸಾಹಸ ಪಟ್ಟು ಹೊರಗೆತ್ತಿದರು. ಗಂಭೀರ ಗಾಯಗೊಂಡಿದ್ದ ಅವರನ್ನು 108 ಆ್ಯಂಬ್ಯುಲೆನ್ಸ್Õ ಮೂಲಕ ಮೊದಲಿಗೆ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಂಬೆಯ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ದಾರಿಮಧ್ಯೆ ನೌಶಾದ್ ಮೃತಪಟ್ಟಿದ್ದರು. ಚರಣ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಅವರೂ ಮೃತಪಟ್ಟರು.
ನೌಶಾದ್ ಮೃತದೇಹವನ್ನು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಮತ್ತು ಚರಣ್ ಮೃತ ದೇಹ ವನ್ನು ಮಂಗಳೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.
Related Articles
Advertisement
ಪ್ರತಿಭಾನ್ವಿತ ವಿದ್ಯಾರ್ಥಿಗಳುಮೃತ ಚರಣ್ ಮತ್ತು ನೌಶಾದ್ ಸೈಂಟ್ ಅಲೋಶಿಯಸ್ ಐಟಿಐ ಕಾಲೇಜಿನ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಾಗಿದ್ದು, ಸ್ನೇಹಿತರು. ಮಂಗಳೂರಿನಿಂದ ಚರಣ್ ಅವರ ದ್ವಿಚಕ್ರ ವಾಹನದಲ್ಲಿ ವಾಮದಪದವಿನ ನೌಶಾದ್ ಮನೆಯತ್ತ ಹೊರಟಿದ್ದರು. ಚರಣ್ ಬೈಕ್ ಚಲಾಯಿಸುತ್ತಿದ್ದರು. ಗಂಗಾಧರ ಶ್ರೀಯಾನ್-ಶೋಭಾ ದಂಪತಿಯ ಏಕೈಕ ಪುತ್ರ ಚರಣ್ ಪ್ರತಿಭಾವಂತ ವಿದ್ಯಾರ್ಥಿ. ಅವರು ಕಟ್ಟಿಸಿದ ನೂತನ ಮನೆಯ ಗೃಹ ಪ್ರವೇಶ ವನ್ನು ಮುಂದಿನ ತಿಂಗಳು ನಡೆಸಲು ಸಿದ್ಧತೆಗಳು ನಡೆದಿದ್ದು, ಇದ್ದೊಬ್ಬ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ನೌಶಾದ್ ಮೂಡನಡುಗೋಡು ಗ್ರಾಮದ ಮಜಲೋಡಿ ನಿವಾಸಿ ಅಬ್ದುಲ್ ಮಜೀದ್ ಅವರ ಮೂವರು ಪುತ್ರರಲ್ಲಿ ಕೊನೆಯವರು. ನೌಶಾದ್‌ಗೆ ಸಹೋದರ ಮತ್ತು ಸಹೋದರಿ ಇದ್ದಾರೆ. ನೌಶಾದ್ ಕೂಡ ಪ್ರತಿಭಾವಂತ ವಿದ್ಯಾರ್ಥಿ. ತಂದೆ ಮಜೀದ್ ಅಂಗಡಿ ಹೊಂದಿದ್ದಾರೆ.