Advertisement

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

01:27 AM Apr 28, 2024 | Team Udayavani |

ವಾಷಿಂಗ್ಟನ್‌: ಅಮೆರಿಕದ ಸೌತ್‌ ಕೆರೋಲಿನಾದಲ್ಲಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾರತ ಮೂಲದ 3 ಮಹಿಳೆಯರು ಸಾವಿಗೀಡಾಗಿದ್ದಾರೆ. ಸೌತ್‌ ಕೆರೋಲಿನಾದ ಗ್ರೀನ್‌ವಿಲ್ಲೆ ಕೌಂಟಿ ಬಳಿ ಅತೀ ವೇಗದಲ್ಲಿ ಚಲಿಸುತ್ತಿದ್ದ ಕಾರು, ತಡೆಗೋಡೆಗಳನ್ನು ಮುರಿದುಕೊಂಡು ಸೇತುವೆ ಮೇಲಿಂದ ಹಾರಿದ್ದು, ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಮರದ ಮೇಲೆ ಬಿದ್ದಿದೆ.

Advertisement

ಘಟನೆಯಲ್ಲಿ ಗುಜರಾತ್‌ನ ಆನಂದ್‌ ಜಿಲ್ಲೆಯ ರೇಖಾಬೆನ್‌ ಪಟೇಲ್‌, ಸಂಗೀತಾಬೆನ್‌ ಪಟೇಲ್‌, ಮನೀಶಾಬೆನ್‌ ಪಟೇಲ್‌ ಅಸುನೀಗಿದ್ದಾರೆ. ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next