ಮಳವಳ್ಳಿ: ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಗೇಟ್ ಬಳಿ ಟಿಪ್ಪರ್ ಲಾರಿ ಮತ್ತು ಆಟೋ ಪರಸ್ಪರ ಢಿಕ್ಕಿ ಹೊಡೆದು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಹಿತ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ತಾಲೂಕಿನ ಬಂಡೂರು ಗ್ರಾ.ಪಂ. ಅಧ್ಯಕ್ಷೆ, ದಡದಪುರ ಗ್ರಾಮದ ಮುತ್ತಮ್ಮ (45), ಅವರ ಪುತ್ರಿ ಬಸಮ್ಮಣ್ಣಿ (30), ಪುತ್ರ ವೆಂಕಟೇಶ (25), ಬಸಮ್ಮಣ್ಣಿ ಅವರ ಮಕ್ಕಳಾದ ಚಾಮುಂಡೇಶ್ವರಿ(8) ಹಾಗೂ ಎರಡು ವರ್ಷದ ಗಂಡು ಮಗು ಮೃತಪಟ್ಟವರು.
ಇವರು ಶುಕ್ರವಾರ ಮದ್ದೂರಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಮದ್ದೂರು ಕಡೆಯಿಂದ ಪ್ಯಾಸೆಂಜರ್ ಆಟೋದಲ್ಲಿ ಮರಳುತ್ತಿದ್ದಾಗ ಮಳವಳ್ಳಿಯಿಂದ ಮದ್ದೂರಿನತ್ತ ತೆರಳುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಆಸ್ಪತ್ರೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಡಿ.13ರಿಂದ ಬೆಳಗಾವಿಯಲ್ಲಿ ಅಧಿವೇಶನ
ಮುತ್ತಮ್ಮ ಅವರು ಕೊರಮ ಸಮಾಜದಿಂದ ಆಯ್ಕೆಯಾಗಿರುವ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.