Advertisement

Accident: ಲಾರಿ, ಬಸ್ ನಡುವೆ ಡಿಕ್ಕಿ- ಡ್ರೈವರ್, ಪ್ರಯಾಣಿಕರು ಪ್ರಾಣಪಾಯದಿಂದ ಪಾರು

04:54 PM May 22, 2023 | Team Udayavani |

ಕುರುಗೋಡು: ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಕಾರಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿರುವ ಘಟನೆ ಸೋಮಸಮುದ್ರ ಹೊರವಲಯಲ್ಲಿ ನಡೆದಿದೆ.ಸಿರುಗುಪ್ಪ ದಿಂದ ಜಿಂದಾಲ್ ಗೆ ತೆರಳುತಿದ್ದ ಲಾರಿ ಮತ್ತು ಬೆಂಗಳೂರಿನಿಂದ ಯಾದಗಿರಿಗೆ ಹೋಗುತಿದ್ದ ಬಸ್ ಈ ವೇಳೆ ಅಪಘಾತಕ್ಕೀಡಾಗಿವೆ.

Advertisement

ಅಪಘಾತದಿಂದಾಗಿ ಲಾರಿ ಮತ್ತು ಬಸ್ ಗಳು ಜಖಂಗೊಂಡಿವೆ. ಬಸ್ ಡ್ರೈವರ್ ಮತ್ತು ಕಂಡಕ್ಟರ್ ಅಲ್ಪಸ್ವಲ್ಪ ಗಾಯವಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಬಸ್ ನ ಮುಂದೆ ಕೂತು ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನ ಕಾಲಿನ ಹೆಬ್ಬರಳು ತುಂಡಾಗಿದ್ದು, 14 ಜನರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆ ಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕುರುಗೋಡು ಪೊಲೀಸ್ ಠಾಣೆಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿತೀರ್ಥಹಳ್ಳಿ: ನಿದ್ದೆ ಮಂಪರಿನಲ್ಲಿದ್ದ ಚಾಲಕ; ತಳುವೆ ಬಳಿ ಕಾರು ಪಲ್ಟಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next