Advertisement
ಬಲ್ನಾಡಿನ ಉಳ್ಳಾಳ್ತಿ ಕಾಂಪ್ಲೆಕ್ಸ್ ಬಳಿ ಗೋಲ್ಡನ್ ಬೇಕರಿಯ ಮಾಲಕ ಬಲ್ನಾಡು ಪಳ್ಳಿಕೆರೆ ನಿವಾಸಿ ಅಬ್ದುಲ್ ಅಝೀಜ್ ಅವರ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ಬ್ರಹ್ಮಾವರ ತಾಲೂಕು ವಡ್ಡರ್ಸೆ ಗ್ರಾಮದ ಯಾಳಹಕ್ಲು ನಿವಾಸಿ ಸುಧಾಕರ ಶೆಟ್ಟಿ ಅವರನ್ನು ಪುತ್ತೂರು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶಿಸಿದೆ.
ಅಪಘಾತಗೊಂಡ ರಸ್ತೆಯಲ್ಲಿ ಅಪಘಾತದ ಎರಡು ದಿನ ಮೊದಲು ಜೀಪೊಂದು ಕೆಟ್ಟು ನಿಂತ ಪರಿಣಾಮ ರಸ್ತೆಯ ಮೇಲೆ ಆಯಿಲ್ ಚೆಲ್ಲಿ ಹಲವು ವಾಹನಗಳು ಸ್ಕಿಡ್ ಆಗಿ ಅಪಘಾತ ಸಂಬಂಧಿಸಿದ ಬಗ್ಗೆ 2021ಅ. 11ರಂದು ಉದಯವಾಣಿ ವರದಿ ಮಾಡಿತ್ತು. ಈ ವರದಿಯ ಪ್ರತಿಯನ್ನು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿ ಅಪಘಾತದಲ್ಲಿ ಆರೋಪಿಯ ಯಾವುದೇ ತಪ್ಪು ಇಲ್ಲ ಎಂದು ವಾದಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಯನ್ನು ದೋಷ ಮುಕ್ತಗೊಳಿಸಿದೆ. ಆರೋಪಿ ಪರ ಕುಂದಾಪುರದ ವಕೀಲ ಶ್ಯಾಮಸುಂದರ ನಾೖರಿ ವಾದಿಸಿದ್ದರು.