Advertisement

ಸೊರಬ: ಬೈಕ್ ಗೆ ಲಾರಿ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

09:53 PM Feb 03, 2022 | Suhan S |

ಸೊರಬ: ಚಲಿಸುತ್ತಿದ್ದ ಬೈಕ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕೆರೆಕೊಪ್ಪ ಹಾಗೂ ಸಂಪಗೋಡು ಗ್ರಾಮದ ನಡುವೆ ಗುರುವಾರ ನಡೆದಿದೆ.

Advertisement

ಕುಪ್ಪಗಡ್ಡೆ ಗ್ರಾಮದ ಎಕ್ಬಾಲ್ ಸಾಬ್ ( 45) ಮೃತ ಬೈಕ್ ಸವಾರ. ಬನವಾಸಿ ಮಾರ್ಗದಿಂದ ಆಗಮಿಸುತ್ತಿದ್ದ ಲಾರಿಯೊಂದು ಸಂಪಗೋಡು ಕಡೆಗೆ ತೆರಳುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಆನವಟ್ಟಿ ಪಿಎಸ್ಐ ರಾಜು ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next