Advertisement

ಪಾವಗಡ: ಬಸ್ – ಬೈಕ್ ಢಿಕ್ಕಿ; ಓರ್ವ ಸ್ಥಳದಲ್ಲೇ ಸಾವು

01:51 PM Mar 16, 2022 | Team Udayavani |

ಪಾವಗಡ:  ಬಸ್ – ಬೈಕ್ ಢಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬುಡ್ಡಾರೆಡ್ಡಿ ಹಳ್ಳಿಯ ಟೋಲ್ ಬಳಿ ಬುಧವಾರ ಮುಂಜಾನೆ ನಡೆದಿದೆ.

Advertisement

ಆಂದ್ರಪ್ರದೇಶ ಮೂಲದ ವ್ಯಕ್ತಿ ವೈ.ಎನ್ ಮೃತ ದುರ್ಧೈವಿ ಎಂದು ತಿಳಿದು ಬಂದಿದೆ.

ತಾಲ್ಲೂಕಿನ ಬುಡ್ಡಾರೆಡ್ಡಿ ಹಳ್ಳಿಯ ಟೋಲ್ ನಿಂದ 500 ಮೀಟರ್ ದೂರದಲ್ಲಿ ಪಾವಗಡ ಹೋಗುವ ರಸ್ತೆಯಲ್ಲಿ ಬೆಳಿಗ್ಗೆ 11.30 ಸಮಯದಲ್ಲಿ ದ್ವಿಚಕ್ರ ವಾಹನ ಮತ್ತು ಬಸ್ ಢಿಕ್ಕಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next