ಕುಂಬಳೆ: ಮಂಜೇಶ್ವರ ಹೊಸಂಗಡಿಯ ರೈಲ್ವೇ ಗೇಟಿನ ಬಳಿಯ ನಿವಾಸಿ ದಿನೇಶ್ ಕುಮಾರ್-ಸುಮತಿ ದಂಪತಿ ಪುತ್ರ ದೀಕ್ಷಿತ್ (30) ಅವರ ಸ್ಕೂಟರ್ ಖಾಸಗಿ ವ್ಯಕ್ತಿಯ ಆವರಣ ಗೋಡೆಗೆ ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸಾವನ್ನಪ್ಪಿದ್ದಾರೆ.
ಗುರುವಾರ ಮುಂಜಾನೆ 3 ಗಂಟೆಗೆ ಕಟ್ಟೆ ಬಜಾರಿನಲ್ಲಿ ದೀಕ್ಷಿತ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಗೋಡೆಗೆ ಬಡಿದು ದೀಕ್ಷಿತ್ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮುಂಜಾನೆ ಬೆಸ್ತರು ಈ ದಾರಿಯಾಗಿ ಮೀನು ಹಿಡಿಯಲು ತೆರಳುತ್ತಿದ್ದಾಗ ಬಿದ್ದವನನ್ನು ಎತ್ತಿ ಆಸ್ಪತ್ರೆಗೆ ಒಯ್ದರೂ, ಚಿಕಿತ್ಸೆ ಫಲಕಾರಿಯಾಗಿಲ್ಲ. ಮಂಗಳೂರಿನಲ್ಲಿ ಚಾಲಕ ವೃತ್ತಿಯಲ್ಲಿರುವ ಈತ ಕೆಲಸ ಮುಗಿಸಿ ಮರಳುವಾಗ ಅಪಘಾತವಾಗಿತ್ತು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.
ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.