Advertisement

ಅಂಕೋಲಾ: ಲಾರಿ ಮತ್ತು ಓಮಿನಿ ನಡುವೆ ಅಪಘಾತ; ಪ್ರತಿಷ್ಠಿತ ಹೊಟೇಲ್ ಮಾಲಕರ ಪತ್ನಿ ಸಾವು

02:36 PM Jun 19, 2022 | Team Udayavani |

ಅಂಕೋಲಾ: ಲಾರಿ ಮತ್ತು ಓಮಿನಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹೊನ್ನಳ್ಳಿ ರಾ.ಹೆ 63 ರಲ್ಲಿ ರವಿವಾರ ( ಜೂ.19) ರಂದು ನಡೆದಿದೆ.

Advertisement

ಅಪಘಾತದಲ್ಲಿ ಯಲ್ಲಾಪುರದ ಪ್ರತಿಷ್ಠಿತ ಹೊಟೇಲ್ ಮಾಲಕರ ಪತ್ನಿ ಸಹನಾ ಮಂಜುನಾಥ ಶಾನಭಾಗ (40) ಎಂಬುವರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಸ್ನೇಹಾ,(21) ಪ್ರೇಕ್ಷಾ (19)  ಅನೀತಾ ಆನಂದು ಶಾನಭಾಗ (45 ) ಅಚ್ಯುತ  ನಾಗೇಶ ಶಾನಭಾಗ ( 53) ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಆಲೂರು: ಕ್ಯಾಂಟರ್‌ – ಕಾರು ಢಿಕ್ಕಿ; ಧರ್ಮಸ್ಥಳಕ್ಕೆ ಹೂರಟಿದ್ದ ತಂದೆ,ಮಗ ದಾರುಣ ಸಾವು

ಮದುವೆ ಸಮಾರಂಭಕ್ಕೆ ಯಲ್ಲಾಪುರದಿಂದ ಅಂಕೋಲಾಗೆ ಬರುವಾಗ ಲಾರಿ ಚಾಲಕನ ಅಜಾಗರೂಕತೆ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ.

Advertisement

ಘಟನಾ ಸ್ಥಳಕ್ಕೆ ಅಂಕೋಲಾ ಪಿ.ಎಸ್.ಐ ಮಹಾಂತೇಶ ಮತ್ತು ಸಿಬ್ಬಂದಿ ಭೇಟಿ ನೀಡಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿ, ತನಿಖೆ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next