Advertisement

ಕ್ರೀಡೆಯಲ್ಲಿ ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

01:19 PM Sep 22, 2022 | Team Udayavani |

ಕಲಬುರಗಿ: ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ ಜಿಲ್ಲೆಯನ್ನು ರಾಜ್ಯದಲ್ಲಿ ಗುರುತಿಸಿ, ಕೀರ್ತಿ ತರುವಲ್ಲಿ ಯಶಸ್ವಿಯಾಗಿ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ನವೀನ್‌ ಕುಮಾರ ಯು. ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಅಶ್ರಯದಲ್ಲಿ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಗುರಿ, ಹುಮ್ಮಸ್ಸು ಮತ್ತು ಆಸಕ್ತಿಯಿಂದ ಬಂದಿರುತ್ತೀರಿ ಇದೊಂದು ಆರೋಗ್ಯಪೂರ್ಣ ಕ್ರೀಡೆಯಾಗಲಿ ಎಂದು ಹಾರೈಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಮಾತನಾಡಿ, ವಿಭಾಗ ಮಟ್ಟದ ದಸರಾ ಕ್ರೀಡಾಕೂಟಗಳು ನಡೆಯಲಿದ್ದು, ಮುಂದೆ ಆಯ್ಕೆಯಾದ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಯಶಸ್ವಿಯಾಗಿ ಜಯಶಾಲಿಗಳಾಗಲಿ. ಈಗಾಗಲೇ ಅತ್ಯುತ್ತಮವಾದ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಅತ್ಯಂತ ಸದೃಢ ಮತ್ತು ಸಮರ್ಥವಾಗಿ ಕ್ರೀಡೆಯಲ್ಲಿ ಭಾಗವಹಿಸಿ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯಿತ್ರಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಆಟವಾಡಿ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಹೆಸರುವಾಸಿ ಮಾಡಬೇಕು. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ. ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ತಂಡಗಳು ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.

ತಾಲೂಕು ದೈಹಿಕ ಶಿಕ್ಷಕ ವಿಷಯ ವೀಕ್ಷಕ ಶಿವಶರಣಪ್ಪ ಮಕಾಳೆ, ಕೆಂಭಾವಿ ದೈಹಿಕ ಶಿಕ್ಷಕ ಮುಜಮ್ಮಲ್‌, ದೈಹಿಕ ಶಿಕ್ಷಕ ಧನಂಜಯ ರಾಯಚೂರು, ಹಾಕಿ ತರಬೇತುದಾರ ಸಂಜಯ್‌ ಬಾಣದ, ಬಾಸ್ಕೆಟ್‌ ಬಾಲ್‌ ತರಬೇತಿದಾರ ಪ್ರವೀಣ್‌ ಪುಣೆ, ಅಥ್ಲೆಟಿಕ್ಸ್‌ ತರಬೇತಿದಾರ ರಾಜು ಚವ್ಹಾಣ, ಕರಾಟೆ ತರಬೇತಿದಾರ ಮನೋಹರ್‌ ಬಿಂಗೆ, ಜೋಡೋ ತರಬೇತಿದಾರ ಅಶೋಕ್‌ ಎಂ ಹಾಗೂ ವಿವಿಧ ಜಿಲ್ಲೆಗಳ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಇದ್ದರು.

Advertisement

ಈ ಕ್ರೀಡಾಕೂಟದಲ್ಲಿ ಬೀದರ್‌, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ, ವಿಜಯನಗರ ಹಾಗೂ ಬಳ್ಳಾರಿಯಿಂದ ಬಂದಿರುವ ಕ್ರೀಡಾ ಪಟುಗಳು ಭಾಗವಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next