Advertisement
ಮಂಗಳವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ನಡೆದಿದೆ. ಆದರೆ ಉಡುಪಿ ನಗರಸಭೆಯ 35 ವಾರ್ಡ್‌ಗಳ ಪೈಕಿ 4 ವಾರ್ಡ್‌ಗಳಲ್ಲಿ ಮಾತ್ರ ನಗರಸಭೆ ಮತ್ತು ಜಿಲ್ಲಾಡಳಿತದ ವತಿಯಿಂದ ಟ್ಯಾಂಕರ್ ನೀರು ಪೂರೈಕೆಯಾಗಿದೆ. ಇತರ ಕಡೆಗಳಿಗೆ ನಾನು ಮತ್ತು ನಗರಸಭಾ ಸದಸ್ಯರು ಸ್ವಂತ ಖರ್ಚಿ ನಿಂದ ನೀರು ಪೂರೈಸಿದ್ದೇವೆ ಎಂದು ಶಾಸಕ ರಘುಪತಿ ಭಟ್ ಗಮನ ಸೆಳೆದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿ ಸಿದ ಸಚಿವರು, ಇದು ಅಧಿಕಾರಿಗಳ ಗಂಭೀರ ಲೋಪವಲ್ಲವೆ, ನೀರು ಕೊಡಬಾರದೆಂದು ಸರಕಾರದ ಆದೇಶವಿತ್ತೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀರಿನ ಕೊರತೆಯಿಂದ ಕೆಲವು ಶಾಲೆಗಳಿಗೆ ರಜೆ ನೀಡಿರುವ ಬಗ್ಗೆಯೂ ಪ್ರಶ್ನಿಸಿದರು.
Related Articles
Advertisement
ಹಣ ಪಾವತಿಗೆ ಸೂಚನೆಟ್ಯಾಂಕರ್ ನೀರು ಪೂರೈಸಿದವರಿಗೆ ಬಿಲ್ ಪಾವತಿಯಾಗಿಲ್ಲ. ಇದರಿಂದ ಕೆಲವೆಡೆ ನೀರು ಪೂರೈಕೆಯಾಗುತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ದೂರಿದರು. ಬಾಕಿ ಇರುವ ಮೊತ್ತವನ್ನು 7 ದಿನದೊಳಗೆ ಪಾವತಿಸಬೇಕು. ಪಾವತಿ ಪಾರದರ್ಶಕ, ಶೀಘ್ರವಾಗಿರಲಿ ಎಂದು ಸಚಿವರು ಹೇಳಿದರು. ಸರಕಾರಿ ಜಾಗ ರಕ್ಷಿಸಿ
ಸರಕಾರಿ ಜಾಗದ ಅತಿಕ್ರಮಣ ತಡೆ ಯಲು ಕೂಡಲೇ ಸೂಚನಾ ಫಲಕ, ಬೇಲಿ ಅಳವಡಿಸಬೇಕು. ಅತಿಕ್ರಮಣ ತೆರವುಗೊಳಿಸಿ. ಮೊದಲು ಶ್ರೀಮಂತರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು. ಆಧಾರ್ ತಿದ್ದುಪಡಿ ಗ್ರಾ.ಪಂ.ಗೆ ಕೊಡಿ
ಈ ಹಿಂದೆ ಗ್ರಾ.ಪಂ.ಗಳಲ್ಲಿಯೂ ಆಧಾರ್ ತಿದ್ದುಪಡಿಗೆ ಅವಕಾಶವಿತ್ತು. ಆದರೆ ಈಗ ಇಲ್ಲ ಎಂದು ಶ್ರೀನಿವಾಸ ಪೂಜಾರಿ ಗಮನ ಸೆಳೆದರು. ಈ ಬಗ್ಗೆ ಕೂಡಲೇ ಗಮನಿಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ವಿವಿಧ
ಪಿಂಚಣಿ ಯೋಜನೆಗಳ ಹಣ 7 ತಿಂಗಳಿಂದ ಮಂಜೂರಾಗದೆ ಇರುವ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ಹೆಣ್ಮಕ್ಕಳ ಬಗ್ಗೆ ಕಾಳಜಿ ಇರಲಿ
ಪ್ರಗತಿ ಪರಿಶೀಲನ ಸಭೆಗೆ ಸಚಿವೆ ಡಾ| ಜಯಮಾಲಾ ಗೈರು ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಅವರಿಗೆ ಈ ಸಭೆಯ ಬಗ್ಗೆ ಗೊತ್ತಿರಲಿಲ್ಲ. ಅವರು ಇಂದು ರಾಜ್ಯಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ. ಆದರೂ ನಿನ್ನೆ ರಾತ್ರಿ ಕರೆ ಮಾಡಿ ಅಗತ್ಯವಿದ್ದರೆ ಸಭೆ ರದ್ದು ಮಾಡುತ್ತೇನೆ ಎಂದಿದ್ದರು. ನಾನೇ ಬೇಡ ಎಂದಿದ್ದೆ. ಹೆಣ್ಮಕ್ಕಳ ಬಗ್ಗೆ ಕಾಳಜಿ ಇರಲಿ ಎಂದರು. ಹಣದ ಕೊರತೆ ಇಲ್ಲ
18 ವರ್ಷಗಳಲ್ಲಿ 2005, 2007, 2010 ಮತ್ತು 2017 ಇಸವಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ವರ್ಷ ಬರಗಾಲ ಉಂಟಾಗಿದೆ. ಬರಗಾಲ ವಿಚಾರದಲ್ಲಿ ರಾಜಿ ಇಲ್ಲ. ಹಣಕಾಸಿನ ಕೊರತೆ ಇಲ್ಲ. ಉಡುಪಿ ಡಿಸಿ ಬಳಿಯೂ 24 ಕೋ.ರೂ. ಇದೆ. 6 ತಿಂಗಳ ಹಿಂದೆಯೇ ಎಲ್ಲ ಜಿಲ್ಲೆಯ ಅಧಿಕಾರಿಗಳಿಗೂ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೆ. ಅಧಿಕಾರಿಗಳು ಚುರುಕಾಗಬೇಕಿದೆ ಎಂದು ದೇಶಪಾಂಡೆ ಹೇಳಿದರು.