Advertisement

ಎಸಿಬಿ ಬೇಟೆ: ಭ್ರಷ್ಟರಲ್ಲಿತ್ತು ಕೋಟ್ಯಂತರ ಹಣ, ಕೆ.ಜಿ.ಗಟ್ಟಲೆ ಬಂಗಾರ

11:16 PM Jun 17, 2022 | Team Udayavani |

ಬೆಂಗಳೂರು: ರಾಜ್ಯದ ಸುಮಾರು 80 ಸ್ಥಳಗಳಲ್ಲಿ 21 ಭ್ರಷ್ಟ ಅಧಿಕಾರಿ ಗಳ ನಿವಾಸ ಮತ್ತು ಕಚೇರಿ, ಸಂಬಂಧಿಕರ ಹಾಗೂ ಸ್ನೇಹಿತರ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಶಾಕ್‌ ಕೊಟ್ಟಿದ್ದಾರೆ.

Advertisement

ಕಾರವಾರದ 5 ಸ್ಥಳಗಳಿಗೆ ದಾಳಿ
ಕಾರವಾರದ ಜಿಲ್ಲಾ ನೋಂದಣಾಧಿಕಾರಿ ಬಿ.ಎಸ್‌. ಶ್ರೀಧರ್‌ ಅವರ ನಿವಾಸದ ಮೇಲೆ 36 ಅಧಿಕಾರಿಗಳ ಮತ್ತು 5 ಸಿಬಂದಿ ತಂಡ ದಾಳಿ ನಡೆಸಿ ಅಕ್ರಮ ಸಂಪತ್ತನ್ನು ಬಯಲಿಗೆ ಎಳೆಯಿತು. ನಿವಾಸ, ಕಚೇರಿ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ದಾಳಿ ನಡೆಯಿತು.

ಚಿಕ್ಕಬಳ್ಳಾಪುರ ನಿರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎ. ಮೋಹನ್‌ ಕುಮಾರ್‌ ಅವರ ನಿವಾಸ ಮತ್ತು ಕಚೇರಿ ಮೇಲೆ 41ಅಧಿಕಾರಿ ಹಾಗೂ ಸಿಬಂದಿಗಳ 6 ತಂಡ ದಾಳಿ ನಡೆಸಿ ಸಂಪತ್ತಿನ ಶೋಧ ನಡೆಸಿತು. ನಿವಾಸಗಳು, ಕಚೇರಿ ಸೇರಿದಂತೆ ಒಟ್ಟು 6 ಸ್ಥಳಗಳಲ್ಲಿ ಶೋಧ ನಡೆಯಿತು.

ಬೀದರ್‌ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಜಿಲ್ಲಾ ಯೋಜನಾಧಿಕಾರಿ ತಿಪ್ಪಣ್ಣ ಪಿ. ಸಿರಸಗಿ ನಿವಾಸ ಮತ್ತು ಕಚೇರಿಯ ಮೇಲೆ 2 ತಂಡಗಳಲ್ಲಿ ಒಟ್ಟು 11 ಅಧಿಕಾರಿಗಳ ತಂಡ ಅಕ್ರಮ ಸಂಪತ್ತಿನ ಲೆಕ್ಕಚಾರ ಹಾಕಿತು. ಬೀದರ್‌ನ ಪಶು ವಿಶ್ವವಿದ್ಯಾನಿಲಯದ ಹಿರಿಯ ಸಹಾಯಕ ಮೃತ್ಯುಂಜಯ ಸಿ. ತಿರಾಣ ಅವರ ನಿವಾಸ ಮತ್ತು ಕಚೇರಿ ಮೇಲೂ ಒಟ್ಟು 22 ಅಧಿಕಾರಿ ಹಾಗೂ ಸಿಬ್ಬಂದಿಗಳ 4 ತಂಡ ದಾಳಿ ನಡೆಸಿ ಶೋಧ ನಡೆಸಿತು. ಬೀದರ್‌ ನಗರದ ಎಸ್‌.ಬಿ. ಗುಮ್ಮೆ ಕಾಲೋನಿ ವಾಸ, ಕಲಬುರಗಿ ಜಿಲ್ಲೆ ಮಹಗಾವ್‌ ಗ್ರಾಮದಲ್ಲಿನ ನಿವಾಸ, ಬೀದರ್‌ ಜಿಲ್ಲೆ ಹಾಲಹಳ್ಳಿ ಗ್ರಾಮದಲ್ಲಿ ತಮ್ಮ ಮಾವನ ಮನೆ, ಪಶು ವಿಶ್ವವಿದ್ಯಾಲಯದ ಕಛೇರಿ ಸೇರಿದಂತೆ ಒಟು r 4 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ.

ಕೊಡಗು, ಹಾಸನದಲ್ಲೂ ನುಂಗಣ್ಣರು
ಹಾಸನ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಎಚ್‌.ಇ. ರಾಮಕೃಷ್ಣ ಅವರ ಹಾಸನದ ವಿದ್ಯಾನಗರದ ನಿವಾಸ, ಹಿರಿಸಾವೆ ಸಂಬಂಧಿಕರ ಮನೆ, ಹಾಸನ ಮಿನಿ ವಿಧಾನಸೌಧದ ಸಣ್ಣ ನೀರಾವರಿ ಇಲಾಖೆಯ ಕಚೇರಿ ಸೇರಿದಂತೆ ಒಟ್ಟು 3 ಸ್ಥಳಗಳಲ್ಲಿ ಏಕ ಕಾಲದಲ್ಲಿ ಶೋಧನ ಕಾರ್ಯ ನಡೆಯಿತು. ಒಟ್ಟು 25 ಅಧಿಕಾರಿ ಹಾಗೂ ಸಿಬಂದಿ 3 ತಂಡ ಪರಿಶೋಧ ನಡೆಸಿತು.

Advertisement

ವಿರಾಜಪೇಟೆಯ ಸಹಾಯಕ ಅಭಿಯಂತರ ಓಬಯ್ಯ ಅವರ ಹುಣಸೂರು ವಿನೋಭನಗರ ನಿವಾಸ, ಮೈಸೂರಿನ ಸಂಬಂಧಿಕರ ಮನೆ, ಹುಣಸೂರಿನ 2 ಫಾರ್ಮ್ ಹೌಸ್‌, ವಿರಾಜಪೇಟೆ ಕಚೇರಿ ಸೇರಿದಂತೆ ಒಟ್ಟು 4 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.ಒಟ್ಟು 33 ಅಧಿಕಾರಿ ಹಾಗೂ ಸಿಬಂದಿ 4 ತಂಡಗಳೊಂದಿಗೆ ದಾಳಿ ನಡೆದಿದೆ. ಅಜ್ಜಂಪುರ ಪ.ಪಂ. ದ್ವಿತೀಯ ದರ್ಜೆ ಸಹಾಯಕ ಬಿ.ಜಿ. ತಿಮ್ಮಯ್ಯನ ಕಡೂರು ಟೌನ್‌ ಮನೆ, ಕಡೂರು ತಾಲೂಕು ಬಾಸೂರು ಗ್ರಾಮದಲ್ಲಿನ ತಂದೆ-ತಾಯಿ ಮನೆ, ಅಜ್ಜಂಪುರ ಪಟ್ಟಣ ಪಂಚಾಯತ್‌ ಕಚೇರಿ ಸೇರಿದಂತೆ ಒಟ್ಟು 3 ಸ್ಥಳಗಳಲ್ಲಿ ಏಕ ಕಾಲದಲ್ಲಿದಾಳಿ ನಡೆಸಲಾಗಿದೆ. ಒಟ್ಟು 29 ಅಧಿಕಾರಿ ಹಾಗೂ ಸಿಬಂದಿಗಳ 3 ತಂಡ ದಾಳಿ ನಡೆಸಿದೆ.

ಝಣ, ಝಣ ಕಾಂಚಣ

ಬೆಳಗಾವಿಯ ಪಿಡಬ್ಲ್ಯುಡಿ ಅಧೀಕ್ಷಕ ಭೀಮರಾವ್‌ ಯಶವಂತ ಪವಾರ ಅವರ ನಿವಾಸ ಮತ್ತು ಸಂಬಂಧಿಕರ ಮನೆ ಮೇಲೂ ದಾಳಿ ನಡೆಸಲಾಗಿದ್ದು ಝಣ, ಝಣ ಕಾಂಚಣ ಪತ್ತೆಯಾಗಿದೆ. ಒಟ್ಟು 48 ಅಧಿಕಾರಿ ಹಾಗೂ ಸಿಬಂದಿಗಳ 6 ತಂಡ ಬೆಳಗಾವಿಯ ಟಿಕಳವಾಡಿಯಲ್ಲಿನ ನಿವಾಸ, ನಿಪ್ಪಾಣ ಶಿವಾಜಿನಗರದ ಸಂಬಂಧಿಕರ ಮನೆ, ಬೆಳಗಾವಿ ಯಲ್ಲಿನ ಲೋಕೋಪಯೋಗಿ ಇಲಾಖೆ ವಸತಿ ಗೃಹ, ನಿಪ್ಪಾಣಿಯಲ್ಲಿನ ಸಂಬಂಧಿಕ ಮನೆ, ಬೋರಗಾಂನಲ್ಲಿ ಮಗನ ಹೆಸರಿನಲ್ಲಿವ ಟೆಕ್ಸ್‌ಟೈಲ್ಸ್‌, ಲೋಕೋಪಯೋಗಿ ಇಲಾಖೆಯ ಕಚೇರಿ ಸೇರಿದಂತೆ ಒಟ್ಟು 6 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಗ್ರಾ.ಪಂ. ಕಾರ್ಯದರ್ಶಿಗೂ ರೇಡ್‌
ಗದಗ ಅಸುಂಡಿ ಗ್ರಾಮ ಪಂಚಾ ಯತ್‌ನ ಕಾರ್ಯದರ್ಶಿ ಪ್ರದೀಪ್‌ ಶಿವಪ್ಪ ಆಲೂರು ಅವರ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿನ ,ಬೆಂತೂರ ಗ್ರಾಮದ ಸಂಬಂಧಿಕರ ಮನೆ, ಧಾರವಾಡ ಸಂಬಂಧಿಕರ ಮನೆ,
ಹೆಬ್ಬಳ್ಳಿ ಗ್ರಾಮದಲ್ಲಿನ ಖಾಸಗಿ ಆಸ್ಪತ್ರೆ ಮೇಲೂ ಒಟ್ಟು 33 ಅಧಿಕಾರಿ ಹಾಗೂ ಸಿಬ್ಬಂದಿಗಳ 5 ತಂಡ ಪರಿಶೋಧ ನಡೆಸಿದೆ.

ನುಂಗುಬಾಕರು: ಬಾಗಲಕೋಟೆಯ ನಿರ್ಮಿತಿ ಕೇಂದ್ರ ಯೋಜನ ನಿರ್ದೇಶಕ ಶಂಕರಲಿಂಗ ನಾಗಪ್ಪ ಗೋಗಿ ಅವರ ಬಾಗಲಕೋಟೆ ನವನಗರ ನಿವಾಸ, ಸ್ನೇಹಿತರ ಮನೆ, ವಿದ್ಯಾಗಿರಿ ಮನಗುಳಿ ಬಡಾವಣೆಯ ಸ್ನೇಹಿತನ ನಿವಾಸ, ಹುಬ್ಬಳ್ಳಿ ಯ ಕೇಶ್ವಾಪುರದ ಆಪ್ತರ ವಾಸದ ಮನೆ ಸೇರಿದಂತೆ ಮತ್ತತಿರರ ಕಡೆಗಳಲ್ಲಿ ಒಟ್ಟು 33 ಅಧಿಕಾರಿ ಹಾಗೂ ಸಿಬಂದಿಗಳ 5 ತಂಡ ದಾಳಿ ನಡೆಸಿದೆ. ಬಾಗಲಕೋಟೆ ಆರ್‌.ಟಿ.ಒ. ಯಲ್ಲಪ್ಪ ಪಡಸಾಲಿ ಅವರ ಧಾರವಾಡ
ವಾಸದ ಮನೆ, ಬಾಗಲಕೊಟೆ ನವನಗರ ನಿವಾಸ, ಕೊಪ್ಪಳದ ಭಾಗ್ಯನಗರದ ಮಗನ ನಿವಾಸ, ಸಂಬಂಧಿಕರ ಮನೆ, ಸ್ನೇಹಿತನ ಮನೆ ಮೇಲೆ ಒಟ್ಟು 49 ಅಧಿಕಾರಿ ಹಾಗೂ ಸಿಬಂದಿಗಳ 6 ತಂಡ ಶೋಧನೆ ನಡೆಸಿದೆ. ಕಾರವಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೀವ್‌ ಪಿ. ನಾಯಕ್‌, ಅವರ ಕಾರವಾರದ ಬೃಂದಾವನ್‌ ಅಪಾರ್ಟ್‌ಮೆಂಟ್‌ನ ನಿವಾಸದಲ್ಲಿ 12 ಅಧಿಕಾರಿ ಹಾಗೂ ಸಿಬಂದಿಗಳ 2 ತಂಡ ಶೋಧ ನಡೆಸಿತು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಮೇಲೂ ದಾಳಿ
ಕೊಪ್ಪಳ ಜಿಲ್ಲೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಉದಯ ರವಿ (ಹಾಲಿ ಅಮಾನತು) ಗಂಗಾವತಿ ನಿವಾಸ, ಮುದಗಲ್‌ ನಲ್ಲಿರುವ ಸಂಬಂಧಿಕರ 2 ನಿವಾಸ, ಗಂಗಾವತಿಯಲ್ಲಿರುವ ಸ್ನೇಹಿತನ ಮನೆ ಸೇರಿದಂತೆ ಒಟ್ಟು 4 ಸ್ಥಳಗಳಲ್ಲಿ 30 ಅಧಿಕಾರಿಗಳ ನಾಲ್ಕು ತಂಡ ಬೆಳ್ಳಂಬೆಳಗ್ಗೆ ಶೋಧ ನಡೆಸಿತು. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಸಹಾಯ ಅಭಿಯಂತರ ಪರಮೇಶ್ವರ ನಿವಾಸದ ಮೇಲೆ ಒಟ್ಟು 18 ಅಧಿಕಾರಿ ಹಾಗೂ ಸಿಬಂದಿ 3 ತಂಡ ದಾಳಿ ನಡೆಸಿತು.

ವಿದ್ಯುತ್‌ ಇಲಾಖೆಗೂ ತಟ್ಟಿದ ಬಿಸಿ
ಶಿವಮೊಗ್ಗದ ವಿದ್ಯುತ್‌ ಪರಿವೀಕ್ಷಣಾಲಯ ಇಲಾಖೆಯ ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌ ಡಿ. ಸಿದ್ದಪ ³ ಅವರ ನಿವಾಸ ಮತ್ತು ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ಶಿವಮೊಗ್ಗ ನಗರದ ಎಲ್‌.ಬಿ.ಎಸ್‌. ನಗರದ ನಿವಾಸ, ಹೊನ್ನಾಳಿ ತಾಲೂಕಿನ ಹೆಚ್‌. ಗೋಪಗೊಂಡನಹಳ್ಳಿ ಗ್ರಾಮದ ನಿವಾಸ, ಬೆಂಗಳೂರು ನಗರ ಬಿ.ಟಿ.ಎಸ್‌. ಬಡಾವಣೆ ನಿವಾಸ, ಬೆಂಗಳೂರಿನ ವಿದ್ಯುತ್‌ ಪರಿವೀಕ್ಷಣಾ ಲಯ ಕಚೇರಿ ಸೇರಿದಂತೆ ಒಟ್ಟು 4 ಸ್ಥಳಗಳಲ್ಲಿ ಒಟ್ಟು 28 ಅಧಿಕಾರಿಗಳು 4 ತಂಡಗಳೊಂದಿಗೆ ಅಕ್ರಮ ಸಂಪತ್ತು ಜಾಲಾಡಲಾಗಿದೆ. ರಾಣೆ ಬೆನ್ನೂರಿನ ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಅಭಿಯಂತರ ಚಂದ್ರಪ್ಪ ಸಿ. ಓಲೇಕರ್‌ ಅವರ ರಾಣೆಬೆನ್ನೂರು ಸಿದ್ಧರೂಢ ನಗರ ನಿವಾಸ, ಬ್ಯಾಡಗಿ ತಾಲೂಕಿನ ಅಣೂರ ಗ್ರಾಮದಲ್ಲಿನ ತಂದೆ ನಿವಾಸ, ತುಂಗ ಮೇಲ ªಂಡೆ ಯೋಜನ ಕಚೇರಿ ಸೇರಿದಂತೆ ಒಟ್ಟು 3 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

ನಿವೃತ್ತ ಅಧಿಕಾರಿಗಳಿಗೂ ಶಾಕ್‌
ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಜಿ. ಮಂಜುನಾಥ ಅವರ ಬೆಂಗಳೂರಿನ ನಿವಾಸದ ಮೇಲೆ 12 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರು ಉತ್ತರ ವಿವಿಯ ನಿವೃತ್ತ ರಿಜಿಸ್ಟ್ರಾರ್‌ (ನಿವೃತ್ತ) ಡಾ| ಕೆ. ಜನಾರ್ದನ್‌ ಅವರ ವಿಡಿಯಾ ಲೇಔಟ್‌ನ ವಾಸದ ಮನೆ, ವಿಜಯನಗರದ ನಿವಾಸ, ಅವರ ಪತ್ನಿ ಕರ್ತವ್ಯ ನಿರ್ವಹಿಸುತ್ತಿರುವ ಬೆಂಗಳೂರು ವಿವಿ ಕಚೇರಿ ಸೇರಿದಂತೆ ಒಟ್ಟು 2 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಬಿಡಿಎ ಗಾರ್ಡನರ್‌ ಶಿವಲಿಂಗಯ್ಯ ಅವರ ದೊಡ್ಡಕಲ್ಲಸಂದ್ರದ ನಿವಾಸ, ಜೆ.ಪಿ. ನಗರ 6ನೇ ಹಂತದಲ್ಲಿನ ನಿವಾಸ, ಕೆ.ಎಸ್‌. ಲೇಔಟ್‌ನಲ್ಲಿನ ನಿವಾಸ ಸೇರಿದಂತೆ ಒಟ್ಟು 3 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಕಂದಾಯ ಭವನದ ಸಹಾಯಕ ಮಹಾನಿರೀಕ್ಷಕ ನೋಂದಣಿ (ಆಡಿಟ್‌) ವಿ. ಮಧುಸೂದನ್‌ ನಿವಾಸ, ಕಚೇರಿಗಳಲ್ಲಿ 22 ಅಧಿಕಾರಿಗಳ ತಂಡ ಶೋಧನೆ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next