Advertisement

ಎಸಿಬಿ ದಾಳಿ: ಉಡುಪಿಯ ಸಣ್ಣ ನೀರಾವರಿ ಅಧಿಕಾರಿ ಹರೀಶ್ ಮನೆಯಲ್ಲಿ ಚಿನ್ನದ ಖಜಾನೆ

02:54 PM Jun 17, 2022 | Team Udayavani |

ಉಡುಪಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಇಲಾಖೆಯ ಸಹಾಯಕ ಅಭಿಯಂತರ ಹರೀಶ್ ಅವರ ಕೊರಂಗ್ರಪಾಡಿಯ ಬೈಲೂರು ನಿವಾಸಕ್ಕೆೆ ಶುಕ್ರವಾರ ಮುಂಜಾನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.

Advertisement

1.5 ಕೆಜಿ ಚಿನ್ನ, ಮುಕ್ಕಾಲು ಕೆಜಿ ಬೆಳ್ಳಿ, ಇನ್ನೋವಾ ಕಾರು, ಮಾರುತಿ ಆಲ್ಟೋ 800, 2 ದ್ವಿಚಕ್ರವಾಹನಗಳು ಪತ್ತೆಯಾಗಿವೆ. 4.30 ಲ.ರೂ.ನಗದು ಹಾಗೂ ಅಪಾರ ಪ್ರಮಾಣದ ದಾಖಲೆ ಪತ್ರಗಳು ಮನೆಯಲ್ಲಿ ದೊರೆತಿವೆ. ಇವಿಷ್ಟೇ ಅಲ್ಲದೆ ಹಾವಂಜೆ ಹಾಗೂ ಪೆರ್ಡೂರಿನಲ್ಲಿ ಪತ್ನಿಯ ಹೆಸರಿನಲ್ಲಿ 5 ಸರ್ವೆ ಸಂಖ್ಯೆೆಯಲ್ಲಿ 2 ನಿವೇಶನಗಳು ಪತ್ತೆಯಾಗಿವೆ. ಬ್ಯಾಂಕ್ ನಲ್ಲಿಯೂ ಎಫ್‌ಡಿ ಖಾತೆ ಹೊಂದಿದ್ದು, ಬ್ಯಾಂಕ್ ನಲ್ಲಿರುವ ನಗದುಗಳ ಬಗ್ಗೆೆಯೂ ಮಾಹಿತಿ ಸಂಗ್ರಹ ನಡೆಯುತ್ತಿದೆ. ಕೊರಂಗ್ರಪಾಡಿಯ ಮನೆಯಲ್ಲಿ ಎಸಿಬಿ ಕಾರ್ಯಾಚರಣೆ ಮುಂದುವರಿದಿದೆ.

ಡಿವೈಎಸ್‌ಪಿ ಮಂಜುನಾಥ ಕವರಿ, ಇನ್‌ಸ್ಪೆೆಕ್ಟರ್‌ಗಳಾದ ಸತೀಶ್ ಜಿ.ಜೆ., ರಫೀಕ್ ಎಂ., ಸಿಬಂದಿಗಳಾದ ಯತಿನ್ ಕುಮಾರ್, ಪ್ರಸನ್ನ ದೇವಾಡಿಗ, ರವೀಂದ್ರ ಗಾಣಿಗ, ಅಬ್ದುಲ್ ಜಲಾಲ್, ಅಬ್ದುಲ್ ಲತೀಫ್, ರಾಘವೇಂದ್ರ ಹೊಸಕೋಟೆ, ಸೂರಜ್ ಕಾಪು, ರಮೇಶ್ ಭಂಡಾರಿ ಹಾಗೂ ಪ್ರತಿಮಾ ದಾಳಿಯಲ್ಲಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next