ಬೆಂಗಳೂರು : ರಾಜ್ಯ ಸರ್ಕಾರದ ಪ್ರಯೋಗಾಲಯ ಟೆಂಡರ್ ವಿವಾದದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ ಕ್ಲೀನ್ ಚಿಟ್ ನೀಡಿದೆ.
ಯತೀಂದ್ರ ವಿರುದ್ಧದ ಆಪಾದನೆಗಳು ಸಾಬೀತಾಗದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಕ್ತಾಯ ಗೊಳಿಸುತ್ತಿರುವುದಾಗಿ ಎಸಿಬಿ ಹೇಳಿದೆ.
ಈ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಕಾನೂನು ಪ್ರಕಾರ ಎಸಿಬಿಯವರು ಕ್ರಮ ಕೈಗೊಂಡು ಕ್ಲೀನ್ ಚಿಟ್ ನೀಡಿದ್ದಾರೆ. ಬಿಜೆಪಿಯವರು ಪದೇ ಪದೇ ಯಾಕೆ ಸಿಬಿಐ , ಸಿಬಿಐ ಅನ್ನುತ್ತಿದ್ದಾರೆ ಎಂದು ಕಿಡಿ ಕಾರಿದರು.
ಭ್ರಷ್ಟಾಚಾರದ ಆರೋಪ ಕೇಳಿ ಬಂದ ತಕ್ಷಣ ಮ್ಯಾಟ್ರಿಕ್ಸ್ ಇಮೇಜಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಯತೀಂದ್ರ ರಾಜೀನಾಮೆ ನೀಡಿದ್ದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ಪ್ರಯೋಗಾಲಯ ಸೇವೆ ಕಲ್ಪಿಸುವ ಟೆಂಡರ್ ಅನ್ನು ಮ್ಯಾಟ್ರಿಕ್ಸ್ ಇಮೇಜಿಂಗ್ ಸಂಸ್ಥೆ ಪಡೆದಿತ್ತು. ಮುಖ್ಯಮಂತ್ರಿಯವರ ಪುತ್ರ ಆ ಸಂಸ್ಥೆಯ ಪಾಲುದಾರನಾಗಿರುವ ಕಾರಣ ಪ್ರಭಾವ ಬಳಸಿ ಟೆಂಡರ್ ಪಡೆಯಲಾಗಿದೆ. ಅದಕ್ಕೂ ಮುನ್ನ ಆ ಸಂಸ್ಥೆಗೆ ಬದಲಿ ಜಮೀನು ಸಹ ಕೊಡಲಾಗಿದೆ. ಇದು ಸ್ವಜನಪಕ್ಷಪಾತ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು.