Advertisement

ಎಸಿಬಿ ದಾಳಿ: ಇನ್ನಷ್ಟು ಭ್ರಷ್ಟಾಚಾರ ಬಯಲು

11:00 AM Nov 24, 2021 | Team Udayavani |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ)ದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾದ ಬೆನ್ನ ಲ್ಲೇ ಅದರ ಇನ್ನಷ್ಟು ಹುಳುಕು ಹೊರ ತೆಗೆಯಲು ಮುಂದಾಗಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮಂಗಳವಾರ ನಗರದ ನಾಲ್ಕು ಕಡೆಗಳಲ್ಲಿರುವ ಬಿಡಿಎ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮುಂದುವರಿಸಿದೆ.

Advertisement

ಶುಕ್ರವಾರ ಮತ್ತು ಶನಿವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಮಂಗಳವಾರ ವೈಯಾಲಿಕಾವಲ್‌ ನಲ್ಲಿರುವ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ್ದರು. ಇದೇ ವೇಳೆ ಆರ್‌.ಟಿ.ನಗರಲ್ಲಿನ ಬಿಡಿಎ ಉತ್ತರ ವಿಭಾಗ ಕಚೇರಿ, ವಿಜಯನಗರದಲ್ಲಿ ಪಶ್ಚಿಮ ವಿಭಾಗ ಕಚೇರಿ, ಎಚ್‌ಎಸ್‌ಆರ್‌ ಲೇಔಟ್‌ನ ಪೂರ್ವ ವಿಭಾಗ ಕಚೇರಿ, ಬನಶಂಕರಿಯಲ್ಲಿನ ದಕ್ಷಿಣ ವಿಭಾಗದ ಕಚೇರಿಗಳ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಲಾಯಿತು.

ಈ ವೇಳೆ ಬಿಡಿಎನಲ್ಲಿ ನಡೆಯುತ್ತಿದ್ದ ಇನ್ನಷ್ಟು ಅಕ್ರಮಗಳು ಬಯಲಾಗಿದ್ದು, ನಿವೇಶನ ಹಂಚಿಕೆಯ ಪ್ರತಿ ಹಂತದಲ್ಲೂ ಲಂಚ ಮತ್ತು ಭ್ರಷ್ಟಾಚಾರ ನಡೆದಿ ರುವುದು ಬೆಳಕಿಗೆ ಬಂದಿದೆ. ದಾಳಿಯ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನರ್ಹ ವ್ಯಕ್ತಿಗಳಿಗೆ ಪರಿಹಾರ ನೀಡಿರುವುದು. ಬಿಡಿಎ ಅನುಮೋದಿತ ನಕ್ಷೆ ರೀತಿಯಲ್ಲಿ ಕಟ್ಟವನ್ನು ನಿರ್ಮಾಣ ಮಾಡದೆ ಇರುವುದು.

ಇದನ್ನೂ ಓದಿ:- ಜಲಿಯನ್ ವಾಲಾಬಾಗ್ ಎಲ್ಲರಿಗೂ ತಲುಪಲೆಂದೇ ಈ ಸಿನಿಮಾ ಮಾಡಿದ್ದು : ಸೂಜಿತ್ ಸರ್ಕಾರ್

ಹರಾಜು ಪ್ರಕ್ರಿಯೆ ನಡೆಸದೆ ಕಾರ್ನರ್‌ (ಮೂಲೆ) ಸೈಟ್‌ಗಳನ್ನು ಹಂಚಿಕೆ ಮಾಡಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವನ್ನುಂಟು ಮಾಡಿರುವುದು ಸೇರಿ ಸಾಲು ಸಾಲು ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ಎಸಿಬಿ ತಿಳಿಸಿದೆ. ವಿವಾದಿತ ಅರ್ಕಾವತಿ, ಕೆಂಪೇಗೌಡ ಹಾಗೂ ಶಿವರಾಮ್‌ ಕಾರಂತ್‌ ಬಡಾವಣೆಗಳಲ್ಲಿ ಬಿಡಿಎ ಹಂಚಿಕೆ ಮಾಡಿರುವ ನಿವೇ ಶನಗಳು ಹಾಗೂ ಬಡಾವಣೆಗಾಗಿ ಭೂ ಸ್ವಾಧೀನಕ್ಕಾಗಿ ಪಡೆದಿರುವ ಜಾಗಗಳ ದಾಖಲಾತಿಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ಮೂಲ ದಾಖಲಾತಿಗಳ ಶೋಧ ನಡೆಸುತ್ತಿದ್ದು, ಅಸಲಿ ದಾಖಲಾತಿಗಾಗಿ ಕಂದಾಯ ಇಲಾಖೆಯಿಂದ ಪಡೆಯಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

 ಬಿ.ಜೆ.ಪುಟ್ಟಸ್ವಾಮಿ ಅವರಿಂದಲೂ ದೂರು: ವಿಧಾನಪರಿಷತ್‌ ಮಾಜಿ ಸದಸ್ಯ ಬಿ.ಜೆ ಪುಟ್ಟಸ್ವಾಮಿ ನೀಡಿದ ದೂರಿನ ಆಧಾರದ ಮೇಲೆ ಬಿಡಿಎ ಮೇಲೆ ಎಸಿಬಿ ಅಧಿಕಾರಿಗಳು ದಿಢೀರ್‌ ದಾಳಿ ಮಾಡಿದ್ದಾರೆ. ಬಿಡಿಎ 3,702 ಎಕರೆ ಜಾಗದಲ್ಲಿ ಅನಧಿಕೃತವಾಗಿ ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಭ್ರಷ್ಟಚಾರ ಮಾಡಿ ಕೆಲ ಬಿಡಿಎ ಅಧಿಕಾರಿಗಳು ಕೋಟಿÂಧಿ ಪತಿಗಳಾಗಿದ್ದಾರೆ.

ಈ ಸಂಬಂಧ ಎಸಿಬಿ ಹಿರಿಯ ಅಧಿಕಾರಿಯೊಬ್ಬರಿಗೆ 3-4 ದಿನಗಳ ಹಿಂದೆ ದಾಖಲೆ ಸಮೇತ ದೂರು ನೀಡಿದ್ದೇನೆ. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಎಂಆರ್‌ ಡಿನಲ್ಲಿ 8,456 ಎಕರೆ ಅನಧಿಕೃತ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಜೆ ಪುಟ್ಟಸ್ವಾಮಿ ತಿಳಿಸಿ ದ್ದಾರೆ. ಇದುವರೆಗೂ 40ಕ್ಕೂ ಅಧಿಕ ದೂರುಗಳು ಬಂದಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಸಂತ್ರಸ್ತರು ದೂರು ನೀಡಬಹುದು ಬಿಡಿಎ ಕಚೇರಿಯಲ್ಲಿನ ಅವ್ಯವಹಾರದ ಸಂಬಂಧ ಈಗಾಗಲೇ ಹಲವು ದೂರುಗಳು ಬಂದಿವೆ. ವಂಚನೆಗೊಳಗಾಗಿರುವ ಸಾರ್ವಜನಿಕರಿಗೆ ಬಿಡಿಎ ಕಚೇರಿಯಲ್ಲಿನ ಅವ್ಯಹಾರದ ಕುರಿತು ಎಸಿಬಿ ಕಚೇರಿಗೆ ಆಗಮಿಸಿ ಲಿಖೀತ ದೂರನ್ನು ನೀಡಬಹುದು ಎಂದು ಎಸಿಬಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಇಂದು ಮುಂಜಾನೆ ಆದಾಯಕ್ಕೆ ಮೀರಿದ ಆಸ್ತಿಯ ಆರೋಪದಡಿಯಲ್ಲಿ ಹಲವು ಅಧಿಕಾರಿಗಳ ಮತ್ತು ಅವರ ಸಹಚರರ ಮನೆಗಳಿಗೆ ಏಸಿಬಿ ತನ್ನ ಮೆಗಾ ಬೇಟೆ ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next