ಮಣಿಪಾಲ: ಸಂಶೋಧನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಮೂಲಕ ಇನ್ನಷ್ಟು ಗುಣಮಟ್ಟದ ಶಿಕ್ಷಣ ಒದ ಗಿಸಲು ಪೂರಕವಾಗುವಂತೆ ಅಕಾಡೆಮಿ ಆಫ್ ಜನರಲ್ ಎಜು ಕೇಶನ್ (ಎಜಿಇ) ವ್ಯಾಪ್ತಿಯ ಕಾಲೇಜುಗಳ ಪ್ರಾಧ್ಯಾಪಕರ ಮೊದಲ ಸಮ್ಮೇಳನ ಜ. 15ರಂದು ಮಣಿಪಾಲದಲ್ಲಿ ನಡೆಯಿತು.
ಪ್ರಾಧ್ಯಾಪಕರು ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶ, ರಾಷ್ಟ್ರೀಯ ಶಿಕ್ಷಣ ನೀತಿಯ ಸಮರ್ಪಕ ಅನುಷ್ಠಾನ ಹಾಗೂ ಸಂಶೋಧನಾ ಸಾಮರ್ಥ್ಯ ವೃದ್ಧಿ ಕುರಿತಾಗಿ ನಡೆದ ಸಮ್ಮೇಳನವನ್ನು ಅಕಾಡೆಮಿಯ ಅಧ್ಯಕ್ಷ ಹಾಗೂ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಉದ್ಘಾಟಿಸಿದರು.
ಅನಂತರ ಮಾತನಾಡಿ, ಸಂಶೋಧನೆ ಹಾಗೂ ಕೌಶಲಾಭಿವೃದ್ಧಿ ಒತ್ತು ನೀಡುವ ನಾಲ್ಕು ವರ್ಷ ಪದವಿ (ಆನರ್) ಬಂದಿದೆ. ಕಾಲೇಜುಗಳು ಇದನ್ನು ಆದಷ್ಟು ಬೇಗ ಅನುಷ್ಠಾನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಂಇಎಂಜಿ ಅಧ್ಯಕ್ಷ ಹಾಗೂ ಅಕಾ ಡೆಮಿಯ ರಿಜಿಸ್ಟ್ರಾರ್ ಡಾ| ರಂಜನ್ ಆರ್. ಪೈ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಶುಭಹಾರೈಸಿದರು.
Related Articles
ಡಾ| ಕರುಣಕರ್ ಕೋಟೆಗರ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಮತ್ತು ಇದರಿಂದ ಶಿಕ್ಷರಿಗೆ ಇರುವ ಸವಾಲು, ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಡಾ| ರವಿರಾಜ್ ಎನ್.ಎಸ್. ಮತ್ತು ಡಾ| ವೈ. ಶ್ರೀಹರಿ ಉಪಾಧ್ಯಾಯ ಅವರು ಸಂಶೋಧನೆ, ಅನ್ವೇಷಣೆ, ಉದ್ಯಮಶೀಲತೆಯಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ಬಗ್ಗೆ ಮಾತನಾಡಿದರು. ಡಾ| ವಸುಧಾ ದೇವಿಯವರು ಪಿಎಚ್.ಡಿ. ಅವಕಾಶಗಳ ಮೇಲೆ ಬೆಳಕು ಚೆಲ್ಲಿದರು.
ಡಾ| ಅನ್ನಪೂರ್ಣಾ ಕೆ. ಅವರು ಒತ್ತಡ ನಿರ್ವಹಣೆಯ ಬಗ್ಗೆ ವಿವರ ನೀಡಿದರು. ಡಾ| ವಿದ್ಯಾ ಸರಸ್ವತಿಯವರು ಮಣಿಪಾಲದ ಎಂಸಿಒಡಿಎಸ್‌ನ ಇಕೋಕ್ಲಬ್ ಪರಿಚಯಿಸಿರುವ ರಿಪೆನ್ ಯೋಜನೆ ಬಗ್ಗೆ ತಿಳಿಸಿದರು.
ಮಕ್ಕಳಲ್ಲಿನ ಕ್ಯಾನ್ಸರ್ ಜಾಗೃತಿ ಕುರಿತು ಮಾಹೆ ವಿ.ವಿ.ಯಿಂದ ಫೆ. 12ರಂದು ನಡೆಯಲಿರುವ ಮಣಿಪಾಲ ಮ್ಯಾರಥಾನ್ ಬಗ್ಗೆ ನಿತ್ಯಾನಂದ ನಾಯಕ್ ವಿವರಿಸಿದರು. 250ಕ್ಕೂ ಅಧಿಕ ಪ್ರಾಧ್ಯಾಪಕರು ಎಜಿಇ ವ್ಯಾಪ್ತಿಯ ವಿವಿಧ ಕಾಲೇಜುಗಳಿಂದ ಭಾಗವಹಿಸಿದ್ದರು.
ಡಾ| ರವಿರಾಜ್ ಎನ್.ಎಸ್.ಸ್ವಾಗತಿಸಿದರು. ಅಕಾಡೆಮಿ ಕಾರ್ಯದರ್ಶಿ ವರದರಾಯ ಪೈ ವಂದಿಸಿದರು. ಹಿಲ್ಡಾ ಕರ್ನೆಲಿಯೋ ನಿರೂಪಿಸಿದರು.