Advertisement
ಫೆ. 26ರಂದು ಪೂರ್ವಾಹ್ನ ಬಾಂದ್ರಾ ಪಶ್ಚಿಮದ ಸೈಂಟ್ ಆ್ಯಂಡ್ರೂಸ್ ಸಭಾಗೃಹದಲ್ಲಿ ಮೋಡೆಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ ಷೇರುದಾರರ ಪ್ರತಿಭಾನ್ವಿತ ಮಕ್ಕಳಿಗಾಗಿ ಆಯೋಜಿಸಿದ್ದ 2019-20 ಮತ್ತು 2020-21ನೇ ಶೈಕ್ಷಣಿಕ ಸಾಲಿನ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರವನ್ನು ಪ್ರದಾನಿಸಿ ಶುಭಹಾರೈಸಿದರು. ಬಳಿಕ ಮಾತನಾಡಿದ ಅವರು, ಮೋಡೆಲ್ ಬ್ಯಾಂಕ್ ಒಂದು ಪ್ರಮುಖ ಸಹಕಾರಿ ಬ್ಯಾಂಕ್ ಆಗಿದ್ದು, ಇದು ವೃತ್ತಿಪರವಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಅಗ್ರ 3 ಸಹಕಾರಿ ಬ್ಯಾಂಕ್‌ಗಳಲ್ಲಿ ಇದು ಒಂದಾಗಿ ಗುರುತಿಸಿಕೊಂಡಿರುವುದು ಅಭಿನಂದನೀಯ. ಕೊರೊನಾ ಆಯ್ತು ಈಗ ಉಕ್ರೇನ್ ಯುದ್ಧ ಇವೆಲ್ಲವೂ ಜನಜೀವನವನ್ನು ಅಪಾಯದಲ್ಲಿರಿಸಿದೆ. ಜನರಲ್ಲಿ ಹಣವಿಲ್ಲ, ಆದರೆ ಶಿಕ್ಷಣಕ್ಕೆ ಪೂರ್ಣವಿರಾಮವಿಲ್ಲ. ಇವೆಲ್ಲವೂ ಸದ್ಯ ಕಾಡುವ ಬಹುದೊಡ್ಡ ಸವಾಲುಗಳಾಗಿವೆ. ಆದರೆ ನೀವು ಜೀವನದುದ್ದಕ್ಕೂ ಯಾರನ್ನೂ ದೂಷಿಸದೆ, ಇತರರ ಸಾಧನೆಗಳನ್ನು ಪ್ರಶಂಸಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
Related Articles
Advertisement
ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಷೇರುದಾರರು, ಹಿತೈಷಿಗಳು, ಗ್ರಾಹಕರು, ಬ್ಯಾಂಕ್‌ನ ಸಹಾಯಕ ಪ್ರಧಾನ ಪ್ರಬಂಧಕರಾದ ನರೇಶ್ ಠಾಕೂರ್, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಹಾಜರಿದ್ದರು. ವಿಲಿಯಂ ಜೆ. ಸಿಕ್ವೇರಾ ಸ್ವಾಗತಿಸಿದರು. ಓಸೆxನ್ ಎ.ಫೂನ್ಸೆಕಾ ಅತಿಥಿಗಳನ್ನು ಪರಿಚಯಿಸಿದರು. ಹಿರಿಯ ಪ್ರಬಂಧಕಿ ಬಿಯೆಟಾ ಕಾರ್ವಾಲೋ ಕಾರ್ಯಕ್ರಮ ನಿರೂಪಿಸಿದರು. ಮತ್ತು ಕ್ಲೈರ್ ಅನ್° ಡಿ’ಸೋಜಾ ಪುರಸ್ಕೃತ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಲಾರೇನ್ಸ್ ಡಿ’ಸೋಜಾ ವಂದಿಸಿದರು.
ಬದುಕಿರುವವರೆಗೆ ಕಲಿಯಲು ಬಹಳಷ್ಟಿದೆ :
ಜೀವನ ಒಂದು ಪಾಠಶಾಲೆ ಇದ್ದಂತೆ. ಪ್ರತಿದಿನ ಅದು ನಮಗೆ ಹೊಸ ಪಾಠವನ್ನು ಕಲಿಸುತ್ತದೆ. ನಮ್ಮಲ್ಲಿ ಹೆಚ್ಚಿನವರು ಒಮ್ಮೆ ಪರೀಕ್ಷೆಯನ್ನು ಮುಗಿಸಿದರೆ ಜೀವನದಲ್ಲಿ ಎಲ್ಲವನ್ನು ಸಾಧಿಸಿದಂತೆ ಎಣಿಸುತ್ತಾರೆ. ಆದರೆ ನಮಗೆ ಬದುಕಿರುವವರೆಗೆ ಕಲಿಯಲು ಬಹಳಷ್ಟಿದೆ. ನಾನು ಬ್ಯಾಂಕ್‌ನ ಓರ್ವ ನಿರ್ದೇಶಕನಾಗಿ ಹೆಚ್ಚು ವ್ಯಾಪಾರದ ಅಂಕಿಅಂಶಗಳನ್ನು ಕಾಣಲು ಅಧಿಕ ಆಸಕ್ತಿಯನ್ನು ಹೊಂದಿರಬಹುದು. ಇದು ಭವಿಷ್ಯದಲ್ಲಿ ನಮ್ಮ ಸವಾಲುಗಳಿಗೆ ಉತ್ತರವಾಗಬಲ್ಲದು. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಮತ್ತು ಉತ್ತಮ ದಾರಿಯಲ್ಲಿ ನಡೆಯಲು ನಾವು ಪ್ರೇರೇಪಿಸಬೇಕು. ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಅವರನ್ನು ಬೆಳೆಸಬೇಕು. ಅದು ಬದುಕಿನ ವ್ಯವಸ್ಥೆಗೆ ಪೂರಕವಾಗಬಲ್ಲದು. ಈ ಕಾರ್ಯಕ್ರಮ ಮೋಡೆಲ್ ಬ್ಯಾಂಕ್‌ನ ಗಮನಾರ್ಹ ಉಪಕ್ರಮವಾಗಿದೆ. ತನ್ನ ಷೇರುದಾರರ ಮಕ್ಕಳ ಕಠಿನ ಪರಿಶ್ರಮವನ್ನು ಉತ್ತೇಜಿಸಲು ಮೋಡೆಲ್ ಬ್ಯಾಂಕ್ ಪ್ರತೀ ವರ್ಷ ಪುರಸ್ಕಾರ ಪ್ರದಾನ ಕಾರ್ಯಕ್ರಮ ಆಯೋಜಿಸುತ್ತದೆ. ಮಕ್ಕಳು ತಮ್ಮಲ್ಲಿನ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಮಕ್ಕಳ ಪೋಷಕರಿಗೂ ಇದು ತಮ್ಮ ಮಕ್ಕಳ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲು ಪ್ರೇರಣೆಯಾಗಿದೆ. –ವಿಲಿಯಂ ಜೆ. ಸಿಕ್ವೇರಾ, ಉಪ ಕಾರ್ಯಾಧ್ಯಕ್ಷ, ಮೋಡೆಲ್ ಕೋ. ಆಪರೇಟಿವ್ ಬ್ಯಾಂಕ್
ಚಿತ್ರ-ವರದಿ: ರೋನ್ಸ್ ಬಂಟ್ವಾಳ್