Advertisement

ಸರ್ಕಾರಿ ಆಸ್ಪತ್ರೆ ಶುಚಿತ್ವಕ್ಕೆ ವೈದ್ಯರಿಗೆ ಎಸಿ ಸೂಚನೆ

10:09 AM Jul 03, 2022 | Team Udayavani |

ಅಫಜಲಪುರ: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಹಾಯಕ ಆಯುಕ್ತೆ ಮೋನಾ ರೋತ್‌ ಶನಿವಾರ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆ, ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರು ಶುಚಿತ್ವವಾಗಿ ಇಡುವಂತೆ ವೈದ್ಯರಿಗೆ ತಿಳಿಸಿದರು.

Advertisement

ನಂತರ ರೋಗಿಗಳ ಕೋಣೆಗೆ ಭೇಟಿ ನೀಡಿ ಆಸ್ಪತ್ರೆ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯ ಕುರಿತು ರೋಗಿಗಳ ಜೊತೆ ಚರ್ಚಿಸಿ ಮಾತನಾಡಿದ ಅವರು, 15 ದಿನಗಳ ಹಿಂದೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದಾಗ ಸಾರ್ವಜನಿಕರು ಹಾಗೂ ರೋಗಿಗಳು ಆಸ್ಪತ್ರೆ ಅವ್ಯವಸ್ಥೆ, ಶೌಚಾಲಯಗಳ ಸ್ವಚ್ಛತೆ ಕುರಿತು ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ವೈದ್ಯರು ಹಾಗೂ ಸಿಬ್ಬಂದಿ ಸಭೆ ಕರೆದು ಒಳ ಹಾಗೂ ಹೊರ ರೋಗಿಗಳ ಕೋಣೆಗಳು, ಶೌಚಾಲಯಗಳನ್ನು ಸ್ವಚ್ಛತೆಯಿಂದ ಇಡುವಂತೆ ತಿಳಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೇಲಿಂದ ಮೇಲೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ನಾನೇ ಭೇಟಿ ನೀಡಿ ಪರಿಶಿಲಿಸಿದ್ದೇನೆ ಎಂದರು.

ಆಸ್ಪತ್ರೆ ಹಾಗೂ ಶೌಚಾಲಯಗಳ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಉಪಚಾರ ಮಾಡಿ. ಜನರ ಆರೋಗ್ಯ ದೃಷ್ಟಿಯಿಂದ ವೈದ್ಯರು ಸೇರಿದಂತೆ ಸಿಬ್ಬಂದಿಗಳೆಲ್ಲ ಕೆಲಸ ಮಾಡಬೇಕು. ಡಿ ಗ್ರೂಪ್‌ ನೌಕರರು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎನ್ನುವ ಕುರಿತು ಗಮನಕ್ಕೆ ಬಂದಿದೆ. ಇನ್ಮುಂದೆ ತಪ್ಪು ಮಾಡದೇ ಸರಿಯಾದ ರೀತಿ ಕೆಲಸ ಮಾಡಿ. ಮತ್ತೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಸ್ಪತ್ರೆಗೆ ಬೇಕಾಗುವ ಮೂಲಭೂತ ಸೌಲಭ್ಯ ಕುರಿತು ಶಾಸಕರೊಂದಿಗೆ ಚರ್ಚಿಸಿ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು. ತಹಶೀಲ್ದಾರ್‌ ಸಂಜೀವಕುಮಾರ ದಾಸರ, ಆಸ್ಪತ್ರೆಯ ಪ್ರಭಾರಿ ಮುಖ್ಯಾಧಿಕಾರಿ ವಿನೋದ ರಾಠೊಡ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next