Advertisement

ಎಸಿ ಬಸ್‌ ಸಂಚಾರ ಪುನರಾರಂಭ

11:12 AM Jul 27, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ಪರಿಣಾಮವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಿಂದ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್ಸುಗಳ ಸಂಚಾರವನ್ನು ಸರಕಾರದ ಅನುಮತಿ ಮೇರೆಗೆ ಸೋಮವಾರದಿಂದ ಪುನರಾರಂಭಿಸಲಾಗುವುದು. ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಮೈಸೂರು ನಡುವೆ ಎಸಿ ಸ್ಲೀಪರ್‌ ಮತ್ತು ವೋಲ್ವೋ ಬಸ್ಸುಗಳ ಸಂಚಾರ ಆರಂಭಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ತಿಳಿಸಿದ್ದಾರೆ.

Advertisement

ಬಸ್ಸುಗಳು ಹೊರಡುವ ಸಮಯ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ವೋಲ್ವೊ ಬಸ್‌ ಮಧ್ಯಾಹ್ನ 3:00 ಗಂಟೆಗೆ ಮತ್ತು ರಾತ್ರಿ 10:30 ಗಂಟೆಗೆ ಹಾಗೂ ಎಸಿ ಸ್ಲೀಪರ್‌ ಬಸ್‌ ರಾತ್ರಿ 10:40 ಗಂಟೆಗೆ ಹೊರಡಲಿದೆ. ಹುಬ್ಬಳ್ಳಿಯಿಂದ ಮೈಸೂರಿಗೆ ಎಸಿ ಸ್ಲೀಪರ್‌ ಬಸ್‌ ರಾತ್ರಿ 9:45 ಗಂಟೆಗೆ ಹೊರಡಲಿದೆ. ಎಸಿ ಬಸ್‌ಗಳಲ್ಲದೆ ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ನಾನ್‌ ಎಸಿ ಸ್ಲೀಪರ್‌ ಮತ್ತು ರಾಜಹಂಸ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ. ನಾನ್‌ ಎಸಿ ಸ್ಲೀಪರ್‌ ಗಳು ರಾತ್ರಿ 8:30, 9:00 ಮತ್ತು 10:00 ಗಂಟೆಗೆ ಹಾಗೂ ರಾಜಹಂಸ ಬಸ್‌ ಸಂಜೆ 7:30 ಗಂಟೆಗೆ ಹೊರಡಲಿವೆ. ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಬಸ್ಸುಗಳನ್ನು ರಸ್ತೆಗಿಳಿಸಲಾಗುತ್ತದೆ. ಬಸ್ಸಿನೊಳಗಡೆ ನಿಗದಿತ ತಾಪಮಾನ ನಿರ್ವಹಣೆ ಮಾಡಲಾಗುತ್ತದೆ.

ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಲೀಪರ್‌ ಬಸ್ಸಿನಲ್ಲಿ 20 ಹಾಗೂ ವೋಲ್ವೋ ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ಬಸ್ಸಿನಲ್ಲಿ ಪ್ರಯಾಣಿಕರಿಗೆ ಬ್ಲಾಂಕೆಟ್‌ ಗಳನ್ನು ನೀಡಲಾಗುವುದಿಲ್ಲ. ಮಾರ್ಗ ಮಧ್ಯೆದಲ್ಲಿ ಊಟೋಪಚಾರಕ್ಕಾಗಿ ನಿಲುಗಡೆ ಇರಲ್ಲ. ಆದ್ದರಿಂದ ಪ್ರಯಾಣಿಕರು ಊಟ, ತಿಂಡಿ ಮತ್ತು ನೀರನ್ನು ಮನೆಯಿಂದಲೇ ತರಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ರಾಮನಗೌಡರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next