Advertisement

ಗಂಗಾವತಿ: ಹಿಂದೂ ಧರ್ಮ ಹಾಗೂ ಸಂವಿಧಾನದ ಬಗ್ಗೆ ಅವಹೇಳನ; ಬಿಎ ಪಾಠ ಕೈಬಿಡುವಂತೆ  ಆಗ್ರಹ

07:15 PM Sep 27, 2022 | Team Udayavani |

ಗಂಗಾವತಿ: ಬಳ್ಳಾರಿ ವಿಜಯನಗರ ಶ್ರಿಕೃಷ್ಣ ದೇವರಾಯ ವಿವಿಯ ಪ್ರಥಮ ವರ್ಷದ ಬಿಎ ಕನ್ನಡ ಪಠ್ಯದಲ್ಲಿ ಕಾ.ವೆಂ,ಶ್ರೀನಿವಾಸಮೂರ್ತಿ ಅವರ ಅಧ್ಯಾಯನದಲ್ಲಿ ಹಿಂದೂ ಧರ್ಮದವರನ್ನು ಉಗ್ರಗಾಮಿಗಳೆಂದು ಹಾಗೂ ಸಂವಿಧಾನವನ್ನು ಮನು ಸಂವಿಧಾನವೆಂದು ಅವಹೇಳನಕಾರಿಯಾದ ವಿಷಯವನ್ನು ಪಠ್ಯದಲ್ಲಿ ಅಳವಡಿಸಿದ್ದು ಕೂಡಲೇ ಪಾಠವನ್ನು ಕೈಬಿಡುವಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್  ಕಾರ್ಯಕರ್ತರು ಒತ್ತಾಯಿಸಿ ಪ್ರಾಚಾರ್ಯರ ಮೂಲಕ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಶಾಲಾ ಕಾಲೇಜುಗಳಲ್ಲಿ ಯಾವುದೇ ಜಾತಿ ಧರ್ಮ ಬೇಧಭಾವ ಇಲ್ಲದಂತೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಿದ್ದು ಪ್ರಥಮ ವರ್ಷದ ಬಿಎ ಕನ್ನಡ ಪಠ್ಯದಲ್ಲಿ ಕಾ.ವೆಂ,ಶ್ರೀನಿವಾಸಮೂರ್ತಿ ಅವರ ಅಧ್ಯಾಯನದಲ್ಲಿ ಹಿಂದೂ ಧರ್ಮದವರನ್ನು ಉಗ್ರಗಾಮಿಗಳೆಂದು ಹಾಗೂ ಸಂವಿಧಾನವನ್ನು ಮನು ಸಂವಿಧಾನವೆಂದು ಅವಹೇಳನಕಾರಿಯಾಗಿ ತಿಳಿಸಲಾಗಿದೆ. ವಿವಿ ಪಠ್ಯ ರಚನಾ ಸಮಿತಿಯವರು ಇದನ್ನು ನಿರ್ಲಕ್ಷ್ಯ ಮಾಡಿ ಪಾಠ ಅಳವಡಿಸಿರುವುದು ಸರಿಯಲ್ಲ. ಈಗಾಗಲೇ ಪರೀಕ್ಷೆಗಳು ನಡೆಯುತ್ತಿದ್ದು ಈ ಪಾಠದಿಂದ ಪ್ರಶ್ನೆ ಕೇಳ ಬಾರದು ಒಂದು ವೇಳೆ ಕೇಳಿದರೂ ಉತ್ತರಿಸದಿದ್ದರೂ ಅಂಕ ಕೊಡಬೇಕು. ಇಂತಹ ಅವಹೇಳನಕಾರಿ ಪಾಠ ಅಳವಡಿಸಿದವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸರ್ವಜ್ಞಮೂರ್ತಿ, ಕೌಸ್ತುಭಾ ದಂಡಿನ್, ಭೂಮಿಕಾ ಸೇರಿ ವಿದ್ಯಾರ್ಥಿ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next