ಉಡುಪಿ: ರೈಲ್ವೇ ಸಿಬಂದಿಗೆ ಅವಾಚ್ಯವಾಗಿ ನಿಂದಿಸಿದ ಆರೋಪಿ ಸಮೀರ್ ಭಿವಾಜಿ ಶಿಂಧು ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೊಂಕಣ ರೈಲ್ವೇಯಲ್ಲಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಝೋನಾ ಪಿಂಟೋ ಅವರು ಇಂದ್ರಾಳಿಯ ರೈಲ್ವೇ ನಿಲ್ದಾಣದ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಮಂಗಳೂರು ಸೆಂಟ್ರಲ್‌ನ ಲೋಕಮಾನ್ಯ ತಿಲಕ್ ಜನರಲ್ ಕೋಚ್‌ನಲ್ಲಿ ವ್ಯಕ್ತಿಗಳು ಗಲಾಟೆ ಮಾಡುತ್ತಿರುವ ಬಗ್ಗೆ ಕರೆ ಬಂದಿತ್ತು.
ಈ ವೇಳೆ ಝೀನಾ ಪಿಂಟೋ ಅವರು ಕಾನ್‌ಸ್ಟೆಬಲ್ ಶ್ರೀಕಾಂತ್‌ರೊಂದಿಗೆ ಬೋಗಿಯ ಬಳಿ ಹೋದಾಗ ಕರ್ತವ್ಯ ನಿರತ ಟಿಟಿಇ ಹಾಗೂ ಸಾರ್ವಜನಿಕರು ಗಲಾಟೆ ಮಾಡುತ್ತಿದ್ದ ಸಮೀರ್ ಭಿವಾಜಿ ಶಿಂಧು ಅವರನ್ನು ವಶಕ್ಕೆ ತೆಗೆದುಕೊಂಡರು. ಈ ವೇಳೆ ಆತ ಟಿಟಿಇ ನೀಡಿದ ಜ್ಞಾಪನವನ್ನು ಹಾಗೂ ಪ್ರತಿಯನ್ನು ಹರಿದು ಬಿಸಾಡಿ ಝೀನಾ ಪಿಂಟೋ ಹಾಗೂ ಅವರ ಸಹೊದ್ಯೋಗಿ ಶ್ರೀಕಾಂತ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಬಳಿಕ ಆತನನ್ನು ಕಚೇರಿಗೆ ಕರೆದುಕೊಂಡು ಹೋಗಿ ನಿರೀಕ್ಷಕರ ಎದುರು ಹಾಜರುಪಡಿಸಿದಾಗ ಅವರ ಎದುರು ಕೂಡ ಶ್ರೀಕಾಂತ್ ಅವರಿಗೆ ಜೀವ ಬೆದರಿಕೆ ಹಾಕಿದ. ಸಮವಸ್ತ್ರದಲ್ಲಿ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಾನೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.