Advertisement

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ಸ್‌: ಪ್ರಕರಣ ದಾಖಲು, ಆರೋಪಿಗಾಗಿ ಶೋಧ

12:29 PM Jun 10, 2022 | Team Udayavani |

ಬೆಂಗಳೂರು: ಅಶ್ಲೀಲ ಕಮೆಂಟ್‌ ಹಾಕಿ ಟ್ಯಾಗ್‌ ಮಾಡಿದ ವ್ಯಕ್ತಿಯ ವಿರುದ್ಧ ನಟಿ ರಮ್ಯಾ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಸೆನ್‌ ಠಾಣೆಗೆ ನಟಿ ರಮ್ಯಾ ಖುದ್ದು ಹಾಜರಾಗಿ ದೂರು ನೀಡಿದ್ದಾರೆ.

Advertisement

ಇದನ್ನೂ ಓದಿ: ತಮಿಳುನಾಡಿಗೂ”ನಮ್ಮ ಮೆಟ್ರೋ’ ವಿಸ್ತರಿಸಲು ಚಿಂತನೆ; ಸಿಎಂ ಬೊಮ್ಮಾಯಿ

ಇನ್‌ ಸ್ಟ್ರಾಗ್ರಾಮ್‌ ಖಾತೆಯಲ್ಲಿ ರಮ್ಯಾ ದಿವ್ಯ ಸ್ಪಂದನಾ ಎಂಬ ಹೆಸರಿನ ಖಾತೆ ಹೊಂದಿದ್ದಾರೆ. ಇತ್ತೀಚೆಗೆ ಚಾರ್ಲಿ 777 ಕನ್ನಡ ಚಲನ ಚಿತ್ರ ಚೆನ್ನಾಗಿದೆ ಎಂದು ಜೂ.6ರಂದು ರಮ್ಯಾ ಪ್ರಕಟಿಸಿದ್ದರು.

ಜೂ.8ರಂದು ಪ್ರೀತಮ್‌ ಡಾಟ್‌ ಪ್ರಿನ್ಸ್‌ ಡಾಟ್‌ ಕೆ ಹೆಸರಿನ ಇನ್‌ ಸ್ಟ್ರಾಗ್ರಾಂ ಖಾತೆ ಹೊಂದಿರುವ ವ್ಯಕ್ತಿ ರಮ್ಯಾ ಬಗ್ಗೆ ಅಶ್ಲೀಲ ಪದಗಳಿಂದ ಕಮೆಂಟ್‌ ಮಾಡಿ, ಪೋಸ್ಟ್‌ ಮಾಡಿ, ರಮ್ಯಾಗೆ ಟ್ಯಾಗ್‌ ಮಾಡಿದ್ದ. ಈ ಹಿನ್ನೆಲೆಯಲ್ಲಿ “ನನ್ನ ಮಾನಕ್ಕೆ ಧಕ್ಕೆಯುಂಟು ಮಾಡಿದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ’ ರಮ್ಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸದ್ಯ ರಮ್ಯಾ ದೂರಿನ ಅನ್ವಯ ಎಫ್ ಐಆರ್‌ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಸೆನ್‌ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸುವ ಮೊದಲು ನಟಿ ರಮ್ಯಾ ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿಯನ್ನು ಭೇಟಿಯಾಗಿ ಕೆಲ ಹೊತ್ತು ಚರ್ಚಿಸಿದ್ದರು. ಆರೋಪಿಯನ್ನು ಬಂಧಿಸುವಂತೆ ಕಮಿಷನರ್‌ಗೂ ಮನವಿ ಮಾಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next