ಈ ಸಲದ ಕೇಂದ್ರಬಜೆಟ್‌ನಲ್ಲಿ ಮಹಿಳಾ ವಲಯಕ್ಕೆ ಉತ್ತಮ ಕೊಡುಗೆ ಕೊಟ್ಟಿದ್ದು, ಸ್ತ್ರೀಯರು ಹಾಗೂ ಹೆಣ್ಣುಮಕ್ಕಳಿಗೆ ಅನುಕೂಲವಾಗು ವಂಥ ಯೋಜನೆಗಾಗಿ 3 ಲಕ್ಷ ಕೋಟಿ ರೂ. ಮೀಸಲು ಉತ್ತಮ ಬೆಳವಣಿಗೆ.
ಸರ್ಕಾರದ ನೀತಿ ಯೋಜನೆಯ ನಾಲ್ಕು ಪ್ರಮುಖ ಅಂಶಗಳಲ್ಲಿ ಮಹಿಳೆಯರನ್ನು ಒಂದು ಅಂಶ ವಾಗಿ ಪರಿಗಣಿಸಿರುವುದು ಸಂತಸ ತಂದಿದೆ. ಉದ್ಯೋಗಗಳಲ್ಲಿ ಸ್ತ್ರೀ ಯರ ಭಾಗವಹಿಸುವಿಕೆ ಯನ್ನು ಹೆಚ್ಚಿಸಲು ಸರ್ಕಾರವು ಶೇ.24 ಮಹಿಳಾ ನಿರ್ದಿಷ್ಟ ಕೌಶಲ್ಯ ಕಾರ್ಯಕ್ರಮಗಳನ್ನು ಸ್ಥಾಪಿಸಲಾಗು ವುದು ಎಂದು ಘೋಷಿಸಿರು ವುದುಸ್ವಾಗತಾರ್ಹ.
ಗಾರ್ಮೆಂಟ್ ಕೈಗಾರಿಕಾ ಉದ್ಯಮದಲ್ಲಿ ಬಹುತೇಕ ಮಹಿ ಳೆಯರೇ ಇದ್ದು, ಗಾರ್ಮೆಂಟ್ ಕೈಗಾರಿಕೆಗಳಲ್ಲಿ ಬಳಸುವ ರಾಸಾ ಯನಿಕ ವಸ್ತುಗಳ ಸುಂಕವನ್ನು ಕಡಿಮೆಗೊಳಿಸಿರುವುದು ಪರೋಕ್ಷ ವಾಗಿ ಕಾರ್ಮಿಕರಿಗೆ ಲಾಭದಾಯ ಕವಾಗಲಿದೆ. ಮುದ್ರಾ ಯೋಜನೆಯಲ್ಲಿ 10-20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ದುಡಿವ ಮಹಿಳೆಯರಿಗೆ ವಸತಿ ನಿಲಯಗಳ ನಿರ್ಮಾಣ, ಜತೆಗೆ ಮಹಿಳಾ ಸ್ವಸಹಾಯ ಗುಂಪು ಮಾರುಕಟ್ಟೆ ಪ್ರವೇಶಿಸಲು ಉತ್ತೇಜಿಸಲಾಗಿದೆ.
-ಉಮಾರೆಡ್ಡಿ, ಮಹಿಳಾ ಉದ್ಯಮಿ