Advertisement
ಬಿಜೆಪಿ ಸರಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಸಿದ್ದರಾಮಯ್ಯ ಸಮರ್ಥವಾಗಿ ಟೀಕೆ ಮಾಡುತ್ತಿದ್ದಾರೆ ಅನ್ನುವ ಅಂಶ ರಾಜ್ಯದ ಜನತೆಗೆ ಅನ್ನಿಸುತ್ತಿಲ್ಲ.ಗಂಟಲಿನಿಂದ ಜೋರಾಗಿ ವಾಗ್ದಾಳಿ ಮಾಡಿದ್ರೆ ಜನ ಒಪ್ಪುವುದಿಲ್ಲ.ನಾವು ಭ್ರಷ್ಟಾಚಾರ ಬಿಚ್ಚಿಡುತ್ತೇವೆ, ಬಿಚ್ಚಿಡುತ್ತೇವೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದರು. ಇವತ್ತಿನವರೆಗೂ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ.40% ಅಂತ ಕೆಂಪಣ್ಣ ಹೇಳಿದರೂ, ಆದರೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ.ಒಬ್ಬನೇ ಒಬ್ಬ ಸಚಿವನ ವಿರುದ್ದ ದಾಖಲೆ ಬಿಡುಗಡೆ ಮಾಡಿದರೆ ಉತ್ತರ ಕೊಡುತ್ತೇವೆ. ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಅನ್ನುವ ಅನುಮಾನ ರಾಜ್ಯದ ಜನರದ್ದಾಗಿದೆ” ಎಂದರು.
Related Articles
Advertisement
”ಕಾಶಿ ವಿಶ್ವನಾಥನ ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದರು. ಹಿಂದೂಗಳಿಗೆ ವರ್ಷದಲ್ಲಿ ಒಂದು ದಿನ ಮಾತ್ರ ಪೂಜೆಗೆ ಅವಕಾಶ ಇತ್ತು.ಆ ಸ್ಥಳದಲ್ಲಿ ಗಣಪತಿ, ಮಾರುತಿ ವಿಗ್ರಹ, ಶೃಂಗಾರ ಗೌರಿ, ಈಶ್ವರಲಿಂಗ ಎಲ್ಲಾ ಇದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಸಹಕಾರ ಕೊಡುತ್ತಿದ್ದಾರೋ, ಅದೇ ರೀತಿ ಇಲ್ಲಿಯೂ ಸಹ ಮುಸಲ್ಮಾನರು ಸಹಕಾರ ಕೊಡುತ್ತಾರೆ. ಈ ದೇಶ ಶಾಂತಿಯಿಂದ ಇರಬಾರದು ಎಂಬ ಅಪೇಕ್ಷೆ ಇರುವವರು, ನ್ಯಾಯಾಲಯ ನಂಬದೇ ಇರುವವರು ಕೆಲವರು ಅಡ್ಡ ಬರಬಹುದು.ಮುಸಲ್ಮಾನ ಹಿರಿಯರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ” ಎಂದರು.
”ಸಂವಿಧಾನ ಮೀರಿ, ನ್ಯಾಯಾಲಯದ ತೀರ್ಪು ಮೀರಿ ಗಲಾಟೆ ನಡೆಸುವವರಿಗೆ ಬುದ್ದಿ ಹೇಳಬೇಕು.350ಕ್ಕೂ ಹೆಚ್ಚು ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದಾರೆ ಎಂಬ ಮಾಹಿತಿ ಇದೆ. ಅಯೋಧ್ಯೆ, ಕಾಶಿ, ಮಥುರಾ ಮೂರು ಪವಿತ್ರವಾದ ಕ್ಷೇತ್ರಗಳು. ಮುಸಲ್ಮಾನರು ಹೊಸದಾಗಿ ಕಟ್ಟಿದ ಮಸೀದಿಗಳಿಗೆ ಹಿಂದೂಗಳು ತೊಂದರೆ ಕೊದುವುದಿಲ್ಲ. ಹಳೆ ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದರೆ ಹಿಂದುಗಳು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದರು.