ವಿಜಯಪುರ: ದೇಶಕ್ಕೆ ವಕ್ಫ್ ಮಂಡಳಿ ಎಂಬುದು ಮಾರಕವಾಗಿದೆ. ದೆಹಲಿ, ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ವಕ್ಫ್ ವ್ಯವಸ್ಥೆ ರದ್ದುಗೊಳಿಸಬೇಕೆಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
Advertisement
ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಬಳಿಕ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾಧಿಕಾರಿಯೊಬ್ಬ ಜಿಲ್ಲೆಯಲ್ಲಿದ್ದ ಸರ್ಕಾರದ ನೂರಾರು ಎಕರೆ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ಬರೆದು ಹೋಗಿದ್ದ. ನಾನು ಶಾಸಕನಾದ ಮೇಲೆ 77 ಎಕರೆ ಆಸ್ತಿಯನ್ನು ಮರಳಿ ಕಂದಾಯ ಇಲಾಖೆಗೆ ಪಡೆದಿದ್ದೇನೆ. ಅಲ್ಲದೇ ವಕ್ಫ್ ಮಂಡಳಿ ಅಧೀ ನದಲ್ಲಿರುವ ಸರ್ಕಾರದ ಉಳಿದ ಆಸ್ತಿಯನ್ನೂ ಮರಳಿ ಪಡೆಯಲಾಗುವುದು ಎಂದರು.