Advertisement

ಐಶ್ವರ್ಯ ಕುರಿತು ಟ್ರೋಲ್‌ ಮಾಡಿದವನಿಗೆ ತಿರುಗೇಟು ಕೊಟ್ಟ ಅಭಿಷೇಕ್

02:36 PM Apr 30, 2023 | Team Udayavani |

ಮುಂಬೈ: ಐಶ್ವರ್ಯ ರೈ ಬಚ್ಚನ್ ವೃತ್ತಿಪರ ಆಯ್ಕೆಗಳ ಬಗ್ಗೆ ಪ್ರಶ್ನಿಸುತ್ತಿರುವುದು ಇದೇ ಮೊದಲಲ್ಲ, ಈ ಬಾರಿ ಪತ್ನಿಯ ಕುರಿತು ಟ್ರೋಲ್‌ ಮಾಡಿದವರಿಗೆ ನಟ ಅಭಿಷೇಕ್ ಬಚ್ಚನ್ ಸೂಕ್ತ ಉತ್ತರವನ್ನು ನೀಡಿದ್ದಾರೆ.

Advertisement

ಐಶ್ವರ್ಯಾ ರೈ ಬಚ್ಚನ್ ಅವರು ನಟಿಸಿದ್ದ ಎಪ್ರಿಲ್ 28 ರಂದು ಬಿಡುಗಡೆಯಾದ `ಪೊನ್ನಿಯಿನ್ ಸೆಲ್ವನ್ 2`ಕುರಿತು ಅಭಿಷೇಕ್ ಶನಿವಾರ ಟ್ವೀಟ್ ಮಾಡಿದ್ದರು. “#PS2 ಸರಳವಾಗಿ ಅದ್ಭುತವಾಗಿದೆ!!! ಇದೀಗ ಪದಗಳು ಸಾಲುತ್ತಿಲ್ಲ. ಇಡೀ ತಂಡಕ್ಕೆ ಶುಭವಾಗಲಿ ಎಂದು ನಟರು ಮತ್ತು ಪತ್ನಿಯ ಅತ್ಯುತ್ತಮ ಸಾಧನೆಯ ಬಗ್ಗೆ ತುಂಬಾ ಹೆಮ್ಮೆ ವ್ಯಕ್ತ ಪಡಿಸಿದ್ದರು.

ಒಬ್ಬ ವ್ಯಕ್ತಿ “ನೀವು ಮಾಡಬೇಕಾದಂತೆ! ಈಗ ಅವರು ಇನ್ನಷ್ಟು ಚಲನಚಿತ್ರಗಳಿಗೆ ಸಹಿ ಮಾಡಲಿ ಮತ್ತು ನೀವು ಆರಾಧ್ಯಳನ್ನು ನೋಡಿಕೊಳ್ಳಿ” ಎಂದು ಕಾಮೆಂಟ್ ಮಾಡಿದ್ದಾರೆ. ವ್ಯಕ್ತಿಗೆ ಮರುಪ್ರಶ್ನೆ ಹಾಕಿದ ಅಭಿಷೇಕ್, “ಅವಳು ಸಹಿ ಮಾಡಲಿ??? ಸರ್, ಆಕೆಗೆ ಏನನ್ನೂ ಮಾಡಲು ನನ್ನ ಅನುಮತಿ ಅಗತ್ಯವಿಲ್ಲ. ವಿಶೇಷವಾಗಿ ಅವಳು ಪ್ರೀತಿಸುವ ವಿಷಯ.” ಎಂದು ತಿರುಗೇಟು ನೀಡಿದ್ದಾರೆ.

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2, 2022 ರ ಚಿತ್ರದ ಮುಂದುವರಿದ ಭಾಗ. ಚಿತ್ರದ ನಿರೂಪಣೆಗೆ ನಟ ಕಮಲ್ ಹಾಸನ್ ಧ್ವನಿ ನೀಡಿದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಟರಾದ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯ ರೈ ಬಚ್ಚನ್, ತ್ರಿಶಾ, ಐಶ್ವರ್ಯ ಲಕ್ಷ್ಮೀ , ಶೋಭಿತಾ ಧೂಳಿಪಾಲ, ಪ್ರಕಾಶ್ ರಾಜ್, ಜಯರಾಮ್, ಪ್ರಭು, ಆರ್ ಶರತ್‌ಕುಮಾರ್, ಪಾರ್ತಿಬನ್ ಮತ್ತು ವಿಕ್ರಮ್ ಪ್ರಭು ಅವರು ಕಥೆಯನ್ನು ನಿರೂಪಿಸುವ ಮಹಾಕಾವ್ಯದ ಎರಡನೇ ಭಾಗದಲ್ಲಿ ಚೋಳ ರಾಜವಂಶದ ತಮ್ಮ ಪಾತ್ರಗಳನ್ನು ಪುನರಾವರ್ತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next