Advertisement

ಅಭಿಮನ್ಯು ಅಜೇಯ ಶತಕ; ಮುನ್ನಡೆಯತ್ತ ಇಂಡಿಯಾ ರೆಡ್‌

11:00 PM Sep 05, 2019 | Team Udayavani |

ಬೆಂಗಳೂರು: ಅಭಿಮನ್ಯು ಈಶ್ವರನ್‌ ಅವರ ಅಜೇಯ 102 ರನ್‌ ನೆರವಿನಿಂದ ದುಲೀಪ್‌ ಟ್ರೋಫಿ ಕ್ರಿಕೆಟ್‌ ಫೈನಲ್‌ನಲ್ಲಿ ಇಂಡಿಯಾ ಗ್ರೀನ್‌ ವಿರುದ್ಧ ಇಂಡಿಯಾ ರೆಡ್‌ ಇನ್ನಿಂಗ್ಸ್‌ ಮುನ್ನಡೆಯತ್ತ ಸಾಗಿದೆ.

Advertisement

ಮೊದಲ ಇನ್ನಿಂಗ್ಸ್‌ನಲ್ಲಿ ಇಂಡಿಯಾ ಗ್ರೀನ್‌ 231 ರನ್‌ಗೆ ಆಲೌಟಾಗಿತ್ತು. ಇಂಡಿಯಾ ರೆಡ್‌ ದ್ವಿತೀಯ ದಿನದ ಆಟದ ಅಂತ್ಯಕ್ಕೆ 2 ವಿಕೆಟಿಗೆ 175 ರನ್‌ ಗಳಿಸಿದೆ. ಇನ್ನಿಂಗ್ಸ್‌ ಮುನ್ನಡೆ ಪಡೆಯಲು ಕೇವಲ 56 ರನ್‌ ಬೇಕಿದೆ. 173 ಎಸೆತ ಎದುರಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಮನ್ಯು ಈಶ್ವರನ್‌ 11 ಬೌಂಡರಿ, 2 ಸಿಕ್ಸರ್‌ ಮೂಲಕ ಅಬ್ಬರಿಸಿದರು. ಮೊದಲ ವಿಕೆಟಿಗೆ ಪ್ರಿಯಾಂಕ್‌ ಪಾಂಚಾಲ್‌ (33) ಜತೆಗೂಡಿ 87 ರನ್‌ ಪೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next