Advertisement

ಪುಟ್ಟ ನೌಕೆಯಲ್ಲಿ ವಿಶ್ವಪರ್ಯಟನೆ; ಭಾರತೀಯನಿಗೆ ದ್ವಿತೀಯ ಸ್ಥಾನ

12:46 AM Apr 30, 2023 | Team Udayavani |

ಹೊಸದಿಲ್ಲಿ: ಹೊಸ ತಂತ್ರಜ್ಞಾನದ ಸಹಾಯವಿಲ್ಲದೇ 1968ರ ದಶಕದ ಪರಿಕರಗಳನ್ನೇ ಬಳಸಿಕೊಂಡು ವಿಶ್ವವನ್ನೇ ಸುತ್ತುವ ಜಗತ್ತಿನ ಅತ್ಯಂತ ಕ್ಲಿಷ್ಟಕರ ನೌಕಾಯಾನ ಗೋಲ್ಡನ್ ಗ್ಲೊಬ್ ರೇಸ್‌ 2022ನ್ನು ಪೂರ್ಣಗೊಳಿಸಿದ 2ನೇ ವ್ಯಕ್ತಿಯೆಂಬ ಖ್ಯಾತಿಗೆ ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್‌ ಅಭಿಲಾಷ್‌ ಟೋಮಿ ಪಾತ್ರರಾಗಿದ್ದಾರೆ.

Advertisement

ವಿಶ್ವವನ್ನೇ ಸುತ್ತುವ ಏಕವ್ಯಕ್ತಿ ನೌಕಾಯಾನದ ಸವಾಲು 2022ರ ಸೆ.4ರಂದು ಆರಂಭಗೊಂಡಿದ್ದು, ಇದರಲ್ಲಿ 11 ದೇಶಗಳ 16 ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತದಿಂದ ಭಾಗವಹಿಸಿದ್ದ ಅಭಿಲಾಷ್‌ ಬನಾಯತ್‌ ಹೆಸರಿನ 36 ಅಡಿ ಎತ್ತದರ ಪುಟ್ಟ ಹಡಗಿನಲ್ಲೇ, 236 ದಿನಗಳ ನೌಕಾಯಾನವನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಗೋಲ್ಡನ್ ಗ್ಲೊಬ್ ರೇಸ್‌ 2022 ವಿಶ್ವಪರ್ಯಟನಾ ಏಕವ್ಯಕ್ತಿ ನೌಕಾಯಾನದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದು, ಮೊದಲ ಸ್ಥಾನವನ್ನು ದಕ್ಷಿಣ ಆಫ್ರಿಕಾದ ನಾವಿಕ ಕ್ರಿಸ್ಟನ್‌ ನ್ಯೂಸೆcಫ‌ರ್‌ ಅಲಂಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next