ಲಾಹೋರ್ : ಚೀನ ತನ್ನ ತಾಂತ್ರಿಕ ಹಿಡಿತವನ್ನು ಹಿಂತೆಗೆದುಕೊಂಡ ನಂತರ ವಿಶ್ವಸಂಸ್ಥೆ ಯುಎನ್ ಜಾಗತಿಕ ಭಯೋತ್ಪಾದಕ ಎಂದು ಹೆಸರಿಸಿರುವ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿ, ಕಾಶ್ಮೀರವನ್ನು ‘ಪಾಕಿಸ್ತಾನದ ರಾಷ್ಟ್ರೀಯ ಸಮಸ್ಯೆ’ ಎಂದು ವಿಡಿಯೋದಲ್ಲಿ ಬಣ್ಣಿಸಿದ್ದಾನೆ.
ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ಉಪ ನಾಯಕ ಗುರುವಾರ ಲಾಹೋರ್‌ನ ಕೋಟ್ ಲಖ್ಪತ್ ಜೈಲಿನಿಂದ ವಿಡಿಯೋ ವನ್ನು ಬಿಡುಗಡೆ ಮಾಡಿದ್ದು, ಅಲ್-ಖೈದಾ ಅಥವಾ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಯಾವುದೇ ಸಂಪರ್ಕ ಇರುವುದನ್ನು ನಿರಾಕರಿಸಿದ್ದಾನೆ.
ಕಾಶ್ಮೀರದ ಜನರ ಮೇಲಿನ ದೌರ್ಜನ್ಯಗಳು ಕೊನೆಗೊಳ್ಳಲು ವಿಶ್ವಸಂಸ್ಥೆಯ ನಿರ್ಣಯಗಳ ಪ್ರಕಾರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮಕ್ಕಿ ಹೇಳಿದ್ದಾನೆ.
“ಕಾಶ್ಮೀರಕ್ಕೆ ಸಂಬಂಧಿಸಿದಂತೆ, ನಾವು ಪ್ರಮುಖ ಸ್ಥಾನವನ್ನು ಹೊಂದಿದ್ದೇವೆ, ನಾವು ಅದನ್ನು ಪಾಕಿಸ್ಥಾನದ ರಾಷ್ಟ್ರೀಯ ಸಮಸ್ಯೆ ಎಂದು ಪರಿಗಣಿಸುತ್ತೇವೆ ಮತ್ತು ಕಾಶ್ಮೀರದ ಜನರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ವಿಶ್ವಸಂಸ್ಥೆಯ ನಿರ್ಣಯಗಳ ಪ್ರಕಾರ ಇದನ್ನು ಪರಿಹರಿಸಬೇಕು” ಎಂದು ವಿಡಿಯೋದಲ್ಲಿ ಹೇಳಿರುವುದನ್ನು ಕಾಣಬಹುದಾಗಿದೆ.