Advertisement

ವ್ಯಕ್ತಿಯನ್ನು ಅಪಹರಿಸಿ ಕೊಲೆ: 7 ಜನರ ಬಂಧನ

03:42 PM Jun 18, 2022 | Team Udayavani |

ಬೀದರ: ನಗರದ ಗುರುದ್ವಾರದ ವ್ಯಕ್ತಿಯನ್ನು ಅಪಹರಿಸಿ ಕೊಲೆಗೈದಿರುವ 7 ಜನ ಆರೋಪಿತರನ್ನು ನ್ಯೂಟೌನ್‌ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Advertisement

ಜಸಬೀರಸಿಂಗ್‌ ಅಮರಸಿಂಗ್‌ ಎಂಬುವರೇ ಕೊಲೆಗೀಡಾದ ವ್ಯಕ್ತಿ. ಜೂ.16ರಂದು ಜಸಬೀರಸಿಂಗ್‌ ಅವರು ಕಾಣೆಯಾಗಿರುವ ಕುರಿತು ನ್ಯೂಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ಜಸಬೀರಸಿಂಗ್‌ ಕೊಲೆಯಾಗಿ ಪತ್ತೆಯಾಗಿದ್ದಾನೆ.

ಬೀದರ ಬಸ್‌ ನಿಲ್ದಾಣದಿಂದ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿ, ನಂತರ ಸಾಕ್ಷಿ ನಾಶ ಮಾಡಬೇಕೆಂಬ ಉದ್ದೇಶದಿಂದ ತೆಲಂಗಾಣಾದಲ್ಲಿ ಮೃತ ದೇಹವನ್ನು ಸುಟ್ಟು ಹಾಕಿದ್ದಾರೆ. ಪಿಎಸ್‌ಐಗಳಾದ ಕಪಿಲ್‌ ದೇವ, ನಾಗೇಂದ್ರ, ಅಂಬರೀಶ ವಾಗ್ಮೋಡೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಹುಲ್‌, ಮನೋಜ ಕುಪೇಂದ್ರ, ಹನುಮಗೌಡ, ವೆಂಕನಗೌಡ, ಶಾಮರಾವ್‌, ಭರತ, ಶರಣಪ್ಪ, ವಿಷ್ಣು ಲಮಾಣಿ, ಸರಸ್ವತಿ, ವಿಜಯಕುಮಾರ, ದೀಪಾ, ಸಲ್ಮಾ ಬೇಗಂ, ಲತಾ, ನಾಗರೆಡ್ಡಿ, ಶೇಖರ ಮೊದ್ದೀನ್‌, ಲಾಲಸಾಬ್‌ ಮತ್ತು ರವಿ ಆರೋಪಿತರನ್ನು ಪತ್ತೆ ಹಚ್ಚಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next