Advertisement

ಬಾಲಕಿಯ ಅಪಹರಿಸಿ ಗ್ಯಾಂಗ್ ರೇಪ್: ಗೋಣಿ ಚೀಲದಲ್ಲಿ ಕೊಳೆತ ಶವ ಪತ್ತೆ

03:35 PM Feb 21, 2022 | Team Udayavani |

ನವದೆಹಲಿ : 9 ದಿನಗಳ ಹಿಂದೆ ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ಕತ್ತು ಹಿಸುಕಿ ಸಾಯಿಸಲಾದ 14 ವರ್ಷದ ಬಾಲಕಿಯ ಕೊಳೆತ ದೇಹವು ಹೊರ ದೆಹಲಿಯ ನರೇಲಾ ಪ್ರದೇಶದ ಅಂಗಡಿಯೊಂದರಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

Advertisement

ಘಟನೆಗೆ ಸಂಬಂಧಿಸಿ ಸೋಮವಾರ ಮುಂಜಾನೆ ಒಬ್ಬನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ದೆಹಲಿಯಿಂದ ಮುಂಬಯಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಆ ಪ್ರದೇಶದ ಸನ್ನೋತ್ ಗ್ರಾಮದಿಂದ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಪರಾಧದಲ್ಲಿ ಭಾಗಿಯಾಗಿರುವ ಎರಡನೇ ವ್ಯಕ್ತಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 12 ರಂದು ಹದಿಹರೆಯದ ಬಾಲಕಿಯನ್ನು ಅಪಹರಿಸಲಾಗಿತ್ತು ಮತ್ತು ಮೂರು ದಿನಗಳ ನಂತರ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಆಕೆಯ ಪೋಷಕರ ಹೇಳಿಕೆಯ ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಲಾಗಿತ್ತು.

ಕಾಣೆಯಾದ ಒಂದು ವಾರದ ನಂತರ ಶನಿವಾರದಂದು, ಸನ್ನೋತ್ ಗ್ರಾಮದ ತನ್ನ ಅಂಗಡಿಯಲ್ಲಿ ದುರ್ವಾಸನೆ ಬೀರುತ್ತಿರುವ ಬಗ್ಗೆ ಅಂಗಡಿಯವನಿಂದ ಪೊಲೀಸರಿಗೆ ಕರೆ ಬಂದಾಗ ಭಯಾನಕತೆ ಬಯಲಾಯಿತು. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಒಬ್ಬ ಕಾರ್ಮಿಕನು ಕೆಲಸಕ್ಕೆ ಬಂದಿರಲಿಲ್ಲ ಎಂದು ಅಂಗಡಿಯವನು ಹೇಳಿದ್ದಾನೆ.

ಪೊಲೀಸರು ಅಂಗಡಿಯನ್ನು ಪರಿಶೀಲಿಸಿದಾಗ, ಕಾಣೆಯಾದ ಹದಿಹರೆಯದ ಬಾಲಕಿಯ ಶವವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಅಂಗಡಿಯ ಒಂದು ಮೂಲೆಯಲ್ಲಿ ಹಸುವಿನ ಸಗಣಿ ರಾಶಿಯ ಕೆಳಗೆ ಗೋಣಿ ಚೀಲ ಪತ್ತೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಬ್ರಿಜೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.

Advertisement

ತಾಂತ್ರಿಕ ಕಣ್ಗಾವಲು ಮತ್ತು ಮೂಲಗಳನ್ನು ಬಳಸಿಕೊಂಡು, ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿದ್ದು,. ಆತನ ವಿಚಾರಣೆಯಲ್ಲಿ ಆತ ಮತ್ತು ಆತನ ಸಹಚರರು ಹರ್ದೋಯ್‌ನವರಾಗಿದ್ದು, ಮೆಟ್ರೋ ವಿಹಾರ್‌ನಲ್ಲಿ ಮದ್ಯ ಸೇವಿಸಿದ್ದರು ಮತ್ತು ಕೆಲಸದ ನೆಪದಲ್ಲಿ ಆಕೆಗೆ ಫೋನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಅವರು ಹುಡುಗಿಯನ್ನು ಮೋಸದಿಂದ ಕರೆದು ಒಬ್ಬೊಬ್ಬರಾಗಿ ಅತ್ಯಾಚಾರ ಮಾಡಿದರು ಮತ್ತು ನಂತರ ಅವಳು ಧರಿಸಿದ್ದ ಪಲಾಝೋ ಪ್ಯಾಂಟ್ ಅನ್ನು ಬಳಸಿ ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಯಾದವ್ ಹೇಳಿದರು.

ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಹರ್ದೋಯ್ ಜಿಲ್ಲೆಯಲ್ಲೂ ದಾಳಿ ನಡೆಸುತ್ತಿದ್ದೇವೆ. ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಬಿಜೆಆರ್‌ಎಂ ಶವಾಗಾರಕ್ಕೆ ರವಾನಿಸಿ
ಜಹಾಂಗೀರ್ಪುರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next